Saturday, July 20, 2024
HomeUncategorizedಸಂತೆಕಟ್ಟೆ ರಾಷ್ಟೀಯ ಹೆದ್ದಾರಿ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿದ ಯಶ್ ಪಾಲ್ ಸುವರ್ಣ

ಸಂತೆಕಟ್ಟೆ ರಾಷ್ಟೀಯ ಹೆದ್ದಾರಿ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿದ ಯಶ್ ಪಾಲ್ ಸುವರ್ಣ

ಉಡುಪಿ ನಗರಸಭೆಯ ಕಡಿಯಾಳಿ ವಾರ್ಡಿನ ಕಲ್ಸಂಕ, ಪಾಡಿಗಾರ ಹಾಗೂ ಸಂತೆಕಟ್ಟೆ ರಾಷ್ಟೀಯ ಹೆದ್ದಾರಿ ಕಾಮಗಾರಿ ಪ್ರದೇಶಗಳಿಗೆ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಗಾಲ ಹಿನ್ನೆಲೆಯಲ್ಲಿ ಕಲ್ಸಂಕ ಪಾಡಿಗಾರ ಭಾಗದ ಮುಖ್ಯ ತೋಡುಗಳಲ್ಲಿ ನೀರು ಸರಾಗ ಹರಿವಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂತೆಕಟ್ಟೆ ಮುಖ್ಯರಸ್ತೆಯಲ್ಲಿ ವಾಹನಗಳ ಸರ್ವೀಸ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿ, ಸಮರ್ಪಕ ದಾರಿ ದೀಪ ಹಾಗೂ ಸೂಚನಾ ಫಲಕ ಅಳವಡಿಕೆ ಮಾಡುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗೀತಾ ಡಿ. ಶೇಟ್, ಪ್ರಭಾಕರ ಪೂಜಾರಿ, ಮಂಜುಳಾ ನಾಯಕ್, ಪಕ್ಷದ ಪ್ರಮುಖರಾದ ಉಮೇಶ್ ಶೆಟ್ಟಿ ಸಂತೆಕಟ್ಟೆ, ಸತೀಶ್ ಕುಲಾಲ್, ಚಿನ್ಮಯ ಮೂರ್ತಿ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ ಕುಂದರ್, ಮಾಜಿ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ನಗರಸಭೆಯ ಪೌರಾಯುಕ್ತರಾದ ರಾಯಪ್ಪ, ಹಾಗೂ ನಗರ ಸಭೆಯ ಅಧಿಕಾರಿಗಳು, ರಾಷ್ಟೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಕಂಪೆನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular