ಉಡುಪಿ ನಗರ ವ್ಯಾಪ್ತಿಯ ಒಳಚರಂಡಿ ವಿಸ್ತರಣೆ, ಮಳೆ ಹಾನಿ ಪರಿಹಾರ ಅನುದಾನ ಮಂಜೂರು ಮಾಡಿ ಅಧಿವೇಶನದಲ್ಲಿ ಯಶ್ ಪಾಲ್ ಸುವರ್ಣ ಆಗ್ರಹ

0
28

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವಿಸ್ತರಣೆ ಯೋಜನೆಗೆ ಅನುದಾನ ಒದಗಿಸುವಂತೆ ಹಾಗೂ ಪರ್ಯಾಯ ಮಹೋತ್ಸವ ಅಗತ್ಯ ಕಾಮಗಾರಿ ಹಾಗೂ ಮಳೆ ಹಾನಿ ಪರಿಹಾರ ಅನುದಾನ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರವರಿಗೆ ಅಧಿವೇಶನದಲ್ಲಿ ಮನವಿ ಮಾಡಿದರು.

ಸುಮಾರು 3 ಲಕ್ಷ ಜನಸಂಖ್ಯೆ ಹೊಂದಿರುವ ಉಡುಪಿ ನಗರಸಭೆಯ ವಿವಿಧ ಭಾಗಗಳಿಗೆ ಒಳಚರಂಡಿ ವಿಸ್ತರಿಸುವ ಅಗತ್ಯವಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದ್ದು ಬಹುತೇಕ ರಸ್ತೆಗಳು ಹದಗೆಟ್ಟು ಸಂಚಾರ ಯೋಗ್ಯವಾಗಿಲ್ಲ. ವಿಕಲ ಚೇತನರು ಬಳಸುವ ತ್ರಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ನೂರು ಕೋಟಿಗೂ ಮಿಕ್ಕಿ ಮಳೆ ಹಾನಿಯಾಗಿದೆ. ಈ ಹಿಂದೆ ಉಡುಪಿ ಪರ್ಯಾಯ ಮಹೋತ್ಸವದ ಹಿನ್ನೆಲೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಗರಸಭೆಗೆ 25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿತ್ತು. ಕಡಲ್ಕೊರೆತದಂತಹ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ತಕ್ಷಣ 50 ಕೋಟಿ ಅನುದಾನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.

LEAVE A REPLY

Please enter your comment!
Please enter your name here