ಕಾರ್ಕಳ : ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ (ರಿ) ಇದರ ಮಹಾಸಭೆಯು ಒಕ್ಕೂಟದ ಸಭಾಂಗಣದಲ್ಲಿ ಯಶೋಧ ಶೆಟ್ಟಿ ಅಜೆಕಾರು ಇವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 23 ರಂದು ಜರುಗಿತು. ಒಕ್ಕೂಟದ ಕಾರ್ಯದರ್ಶಿಯವರಾದ ವಸಂತಿ ಪಿ ಸುವರ್ಣ ರವರು ವಾರ್ಷಿಕ ವರದಿಯನ್ನು ಮಂಡಿಸಿದರು . ಒಕ್ಕೂಟಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಯಶೋಧ ಶೆಟ್ಟಿ ಅಜೆಕಾರ್ ಇವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು .
ಸಾವಿತ್ರಿ ಮನೋಹರ್ ಅವರು ಉಪಾಧ್ಯಕ್ಷರಾಗಿ , ಅರುಂಧತಿ ಆಚಾರ್ ಅವರು ಕಾರ್ಯದರ್ಶಿಯಾಗಿ , ಶೋಭ ಪ್ರಸಾದ್ ರವರು ಜೊತೆ ಕಾರ್ಯದರ್ಶಿಯಾಗಿ, ಶ್ರೀಲತಾ ಶರ್ಮ ಅವರು ಕೋಶಾಧಿಕಾರಿಯಾಗಿ ಆಯ್ಕೆಗೊಂಡರು . ಪ್ರಭಾವತಿ ಈದು, ರತ್ನಾವತಿ ಎನ್ ನಾಯಕ್ , ವಸಂತಿ ಪಿ ಸುವರ್ಣ, ಜಯಂತಿ ಶೆಟ್ಟಿ , ಕಾಂತಿ ಶೆಟ್ಟಿ, ಜ್ಯೋತಿ ಲಕ್ಷ್ಮಿಯವರನ್ನು ಒಕ್ಕೂಟದ ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಒಕ್ಕೂಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಹಾಗೂ ಶಿಶು ಪಾಲನಾ ಕೇಂದ್ರ ನಡೆಸಲ್ಪಡುತ್ತಿದ್ದು ಕೌಟುಂಬಿಕ ಕಲಹಕ್ಕೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಬಹುದಾಗಿದೆ ಹಾಗೂ ಶಿಶುಪಾಲನ ಕೇಂದ್ರದಲ್ಲಿ ಆರು ತಿಂಗಳಿಂದ ಆರು ವರ್ಷದವರೆಗಿನ ಮಕ್ಕಳ 8 ಉದ್ಯೋಗಸ್ಥ ಪೋಷಕರು ಮಕ್ಕಳನ್ನು ದಾಖಲು ಮಾಡಬಹುದಾಗಿದೆ ಎಂದು ಅಧ್ಯಕ್ಷರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.ರತ್ನಾವತಿ ನಾಯಕ್ ರವರು ಸ್ವಾಗತಿಸಿದರು ಶ್ರೀಲತಾ ಶರ್ಮ ರವರು ಪ್ರಾರ್ಥನೆ ಗೀತೆ ಹಾಡಿದರು. ಕಾಂತಿ ಶೆಟ್ಟಿ ಅವರು ವಂದಿಸಿದರು ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು.