Saturday, June 14, 2025
HomeUncategorizedಯತಿ ಸಮಾಗಮ

ಯತಿ ಸಮಾಗಮ


ಪರ್ಯಾಯಮಠಾಧೀಶರಾದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಪೂಜ್ಯ ಹರಿಹರಪುರಮಠಾಧೀಶರಾದ ಸ್ವಯಂಪ್ರಕಾಶ ಸಚ್ಚಿಚಿದಾನಂದ ಸರಸ್ವತಿಮಹಾಸ್ವಾಮಿಗಳು ಮತ್ತು ತಿರುಚಿ ಮಹಾಸಂಸ್ಥಾನದ ಮಠಾಧೀಶರಾದ ಪೂಜ್ಯ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಉಡುಪಿಗೆ ಆಗಮಿಸಿ ಶ್ರೀಕೃಷ್ಣದರ್ಶನ ಪಡೆದುಕೊಂಡರು.

ಶ್ರೀಮಠದಿಂದ ಸಾಂಪ್ರದಾಯಿಕ ಗೌರವಾದರಗಳೊಂದಿಗೆ ಯತಿದ್ವಯರನ್ನು ಸ್ವಾಗತಿಸಲಾಯಿತು.
ಬಳಿಕಪೂಜ್ಯ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರ ಜೊತೆಗೆ ಉಭಯ ಶ್ರೀಗಳವರಿಗೂ ಶ್ರೀಕೃಷ್ಣ ಪ್ರಸಾದವನ್ನು ನೀಡಿದರು.

ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಸರ್ವಜನೋಪಯೋಗಿಯಾದ ಕೋಟಿ ಗೀತಾಲೇಖನಯಜ್ಞ ಸಾಮಾಜಿಕ ಕ್ರಾಂತಿಯಾಗಿ ಬೆಳೆದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಭಯ ಶ್ರೀಪಾದಂಗಳವರು ಪೂಜಾದಿಕಾರ್ಯಗಳನ್ನು ನೆರವೇರಿಸಿ ಭವ್ಯ ಗೀತಮಂದಿರದ ದರ್ಶನ ಪಡೆದು ಮುಂದೆ ಗೀತಾಮಂದಿರದಲ್ಲಿನಡೆಯುವ ಗೀತಾಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸಂತಸಪಟ್ಟರು.

RELATED ARTICLES
- Advertisment -
Google search engine

Most Popular