ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆಯು ಜನವರಿ 11 ಶನಿವಾರ ರಾತ್ರಿ ಪೂರ್ವದ ಕಟ್ಟು ಕಟ್ಟಳೆಯಂತೆ ತಾಂಗಡಿ ಬರ್ಕೆ ಕಾವರ ಮನೆಯಿಂದ ದೈವಗಳ ಭಂಡಾರ ಹೊರಟು ದೇರಿಂಜ ಗಿರಿಗೆ ಚಿತ್ತೈಸಿ, ಧ್ವಜಾರೋಹಣ ನೆರವೇರಲಿರುವುದು.
ತಾ. 12-01-2025ನೇ ರವಿವಾರ ಬೆಳಿಗ್ಗೆ ಗಂಟೆ 10.00ಕ್ಕೆ ಉಳ್ಳಾಯ ದೈವದ ನೇಮೋತ್ಸವ, ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 9.00ರಿಂದ ಶ್ರೀ ಕೊಡಮುತ್ತಾಯ ದೈವದ ನೇಮೋತ್ಸವವು ನಡೆಯಲಿದೆ.
ತಾ. 13-1-2025ನೇ ಸೋಮವಾರ ರಾತ್ರಿ ಗಂಟೆ 9.00ರಿಂದ ಶ್ರೀ ಕಾಂತೇರಿ ಜುಮಾದಿ ದೈವದ ನೇಮೋತ್ಸವ
ತಾ. 14-1-2025ನೇ ಮಂಗಳವಾರ ರಾತ್ರಿ ಗಂಟೆ 9.00ರಿಂದ ಶ್ರೀ ಜಾರಂದಾಯ ದೈವದ ನೇಮೋತ್ಸವ
ತಾ. 15-1-2025ನೇ ಬುಧವಾರ ರಾತ್ರಿ ಗಂಟೆ 9.00ರಿಂದ ಸರಳ ಜುಮಾದಿ ದೈವದ ನೇಮೋತ್ಸವ
ತಾ. 16-1-2025ನೇ ಗುರುವಾರ ರಾತ್ರಿ ಗಂಟೆ 9.00ರಿಂದ ಶ್ರೀ ಪಿಲಿ ಚಾಮುಂಡಿ ದೈವದ ನೇಮೋತ್ಸವ
ತಾ. 17-1-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 10.00ಕ್ಕೆ ಧ್ವಜ ಅವರೋಹಣ ನಡೆಯಲಿದೆ.
ತಾ. 12.1.2025ರಿಂದ ತಾ. 16.1.2025 ರ ತನಕ ಮಧ್ಯಾಹ್ನ ಗಂಟೆ 1 ರಿಂದ ರಾತ್ರಿ 9.00ರ ತನಕ ನಿತ್ಯ ಅನ್ನಸಂತರ್ಪಣೆ ಜರಗಲಿರುವುದು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.