Thursday, July 25, 2024
Homeರಾಜ್ಯಪೋಕ್ಸೊ ಪ್ರಕರಣ: ಸಿಐಡಿ ಕಚೇರಿಯಲ್ಲಿ ಸಮಾರು 2 ಗಂಟೆ ಯಡಿಯೂರಪ್ಪ ವಿಚಾರಣೆ

ಪೋಕ್ಸೊ ಪ್ರಕರಣ: ಸಿಐಡಿ ಕಚೇರಿಯಲ್ಲಿ ಸಮಾರು 2 ಗಂಟೆ ಯಡಿಯೂರಪ್ಪ ವಿಚಾರಣೆ

ಬೆಂಗಳೂರು: ಅಪ್ರಾಪ್ತ ವಯಸ್ಕ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಇಂದು ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಐಡಿ ಕಚೇರಿಯಲ್ಲಿ ಅಧಿಕಾರಿಗಳು ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪರಿಂದ ಮಾಹಿತಿ ಪಡೆದಿದ್ದಾರೆ.
ಸತತ 2 ಗಂಟೆ ಯಡಿಯೂರಪ್ಪ ವಿಚಾರಣೆ ಎದುರಿಸಿದ್ದಾರೆ. ಡಿವೈಎಸ್ಪಿ ಪುನೀತ್‌ ಪ್ರಕರಕ್ಕೆ ಸಂಬಂಧಿಸಿ ಯಡಿಯೂರಪ್ಪರಿಂದ ಹಲವು ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ಬಳಿಕ ಯಡಿಯೂರಪ್ಪ ಸಿಐಡಿ ಕಚೇರಿಯಿಂದ ದವಳಗಿರಿ ನಿವಾಸಕ್ಕೆ ಹಿಂದಿರುಗಿದ್ದಾರೆ.
ಅಪ್ರಾಪ್ತ ವಯಸ್ಕ ಹುಡುಗಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಮಾ. 14ರಂದು ಹುಡುಗಿಯ ತಾಯಿ ನೀಡಿದ್ದ ದೂರಿನ ಆಧಾರದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರು. ಆದರೆ ತಮ್ಮ ವಿರುದ್ಧದ ಪೋಕ್ಸೊ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿ, ಬಂಧನಕ್ಕೆ ಸಿದ್ಧತೆ ನಡೆದಿತ್ತು. ಆದರೆ ಇದರ ಬೆನ್ನಲ್ಲೇ ಇಂದು ಕೋರ್ಟಿಗೆ ಹಾಜರಾಗುವಂತೆ ಹೈಕೋರ್ಟ್‌ ಸೂಚಿಸಿತ್ತು. ಅಲ್ಲದೆ, ಅಲ್ಲಿವರೆಗೆ ಬಂಧಿಸದಂತೆ ನಿರ್ದೇಶಿಸಿತ್ತು.

RELATED ARTICLES
- Advertisment -
Google search engine

Most Popular