ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನಾ ಮಾಡುವುದರ ಮೂಲಕ ವಿಶ್ವ ಯೋಗ ದಿನವನ್ನು ಭಟ್ಟಾರಕ ಭವನದಲ್ಲಿ ಆಚರಿಸಿದರು.
ಸಂಸ್ಥೆಯ ಅಧ್ಯಕ್ಷ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಯೋಗಾಸನ ಮಾಡಿದರು. ಬಳಿಕ ಸಂದೇಶ ನೀಡಿ, ಯೋಗ, ಧ್ಯಾನವು ಭಾರತದ ಸಂಸ್ಕೃತಿಯ ಶ್ರೇಷ್ಠ ಕೊಡುಗೆ. ಮಾತ್ರವಲ್ಲ ಶ್ರೇಷ್ಠ ಜೀವನ ಕಲೆಯಾಗಿದೆ. ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಪೂರಕ. ವಿದ್ಯಾರ್ಥಿಗಳ ಕಲಿಕೆಗೂ ಯೋಗ ಸಹಕಾರಿ ಎಂದು ನುಡಿದರು.
ಪದ್ಮಾಸನ, ವೀರಾಸನಾ, ಶಲಾಭಾಸನಾ, ಪರ್ವತಾಸನಾ, ವೃಕ್ಷಾಸನ ಸರ್ವಾಂಗಸನಾ ಸಹಿತ ವಿವಿಧ ಯೋಗಾಸನ ಪ್ರಾತ್ಯಕ್ಷಿಕೆಯನ್ನು ಸ್ವಾಮೀಜಿ ಪ್ರದರ್ಶಿಸಿ, ಮಹತ್ವ ತಿಳಿಸಿದರು. ಸ್ವಾತಿ ಹಾಗೂ ಮನಸ್ವಿನಿ ತರಬೇತಿ ನೀಡಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತಾ ವಂದಿಸಿದರು.ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರು ಯೋಗಾಸನ ಮಾಡಿದರು.
