ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಇದೇ ಫೆಬ್ರವರಿ 3ನೇ ತಾರೀಕಿನಿಂದ ಸಂಜೆ 5.00 ರಿಂದ 6.30 ರ ವರೆಗೆ ಯೋಗಾಸನ ಶಿಬಿರ ನಡೆಯಲಿದೆ. ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು. ಫೆಬ್ರವರಿ 4 ರಂದು ಬೆಳಿಗ್ಗೆ 6.30 ಕ್ಕೆ ಮಠದಲ್ಲಿ ರಥ ಸಪ್ತಮಿಯ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವಿರುತ್ತದೆ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 2414412 ಸಂಪರ್ಕಿಸಬಹುದು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.