Sunday, July 14, 2024
Homeಮೂಡುಬಿದಿರೆಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನಾಚರಣೆ ಸಂಭ್ರಮ

ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನಾಚರಣೆ ಸಂಭ್ರಮ

ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮಕ್ಕಳು ಯೋಗಾಸನವನ್ನು ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು.

ಆಯುಷ್ ವೆಲ್ ನೆಸ್ ಸೆಂಟರ್ ನ ಡಾ. ಸಪ್ನಾ ರೈ ದೀಪ ಬೆಳಗಿಸಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಯೋಗವು ಪ್ರಾಚೀನ ಕಾಲದಿಂದ ಬಂದದ್ದಾಗಿದ್ದು, ಇದು ನಮ್ಮ ಪೂರ್ವಜರು ನಮಗೆ ನೀಡಿರುವ ಆಸ್ತಿಯಾಗಿದೆ. ಇಂದಿನ ಜೀವನ ಜೀವನ ಶೈಲಿಯಲ್ಲಿ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಯೋಗವು ತಡೆಯುತ್ತದೆ ಎಂದು ಡಾ. ಸಪ್ನಾ ರೈ ಹೇಳಿದರು.

ಯೋಗದ ಬಗ್ಗೆ ಹೆತ್ತವರು ಮಕ್ಕಳಿಗೆ ಹೇಳಿ, ಅದರ ಪ್ರಾಮುಖ್ಯತೆಯನ್ನು ತಿಳಿಸಿದರೆ ಅವರಲ್ಲಿ ಯೋಗದಲ್ಲಿ ಆಸಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಯೋಗ ಶಿಕ್ಷಕಿ ಸವಿತಾ, ಶುಭ, ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್ ಈ ವೇಳೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular