ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಪುತ್ತಿಗೆ ಮಠ, ಉಡುಪಿ ಹಾಗೂ ಪತಂಜಲಿ ಯೋಗ ಪೀಠ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಗೂ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದರು.
ಪತಂಜಲಿ ಯೋಗ ಪೀಠ, ಉಡುಪಿ ಇದರ ಸದಸ್ಯರಿಂದ ಯೋಗಾಸನ ಕಾರ್ಯಕ್ರಮ ನಡೆಯಿತು.
ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ “

ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಧರ್ಮಸ್ಥಳ ಮಹಾಲಿಂಗೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ “ಸೌಕ್ಯಮನೆ” ಇದರ ಸಹಯೋಗದೊಂದಿಗೆ ಹತ್ತನೇ ಯೋಗ ದಿನಾಚರಣೆಯ ಪ್ರಯುಕ್ತ “ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ” ಮಣಿಪಾಲದಿಂದ ಶ್ರೀ ಕೃಷ್ಣ ಮಠದ ವರೆಗೆ ನಡೆದು ಬಂದು ಇದರ ಸಮಾರೋಪ ಸಮಾರಂಭ ಗೀತಾಮಂದಿರದಲ್ಲಿ ಪರಮಪೂಜ್ಯ ಪರ್ಯಾಯ ಶ್ರೀಪಾದರ ದಿವ್ಯಾ ಉಪಸ್ಥಿತಿಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಡಾ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.