ಲಕ್ನೊ: ಉತ್ತರ ಪ್ರದೇಶ ಸರಕಾರ ಹೊಸ ಸೋಶಿಯಲ್ ಮೀಡಿಯಾ ನೀತಿ ಜಾರಿಗೆ ಕ್ಯಾಬಿನೆಟ್ ಅನುಮೋದನೆ ಪಡೆದಿದೆ. ಈ ನೀತಿಯಲ್ಲಿ ಫೇಸ್ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ, ಎಕ್ಸ್ ಖಾತೆಗಳಲ್ಲಿ ದೇಶವಿರೋಧಿ ಪ್ರಚೋದನಕಾರಿ ವಿಷಯಗಳನ್ನು ನಿಯಂತ್ರಿಸುವ ಗುರಿ ಹೊಂದಲಾಗಿದೆ. ಅದರಲ್ಲೂ ದೇಶ ವಿರೋಧಿ ಪೋಸ್ಟ್‌ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ನೀತಿಯನ್ನು ಈ ಹೊಸ ಕಾನೂನಿನಲ್ಲಿ ಅಳವಡಿಸಲಾಗಿದೆ.
ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮದ ವಿಷಯಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಪರಿಚಯಿಸಲಿದ್ದು, ಕಾನೂನು ಕ್ರಮವನ್ನು ಕಡ್ಡಾಯಗೊಳಿಸಲಿದೆ. ಹೊಸ ನೀತಿಯ ಪ್ರಕಾರ ರಾಷ್ಟ್ರ ವಿರೋಧಿ ಪೋಸ್ಟ್‌ಗಳಿಗೆ ಮೂರು ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೂ ಶಿಕ್ಷೆಯನ್ನು ನೀಡಬಹುದಾಗಿದೆ. ಡಿಜಿಟಲ್ ಪ್ಲಾಟ್‌ಫಾರಂಗಳನ್ನು ದುರುಪಯೋಗಪಡಿಸಿಕೊಳ್ಳುವ ಕಾನೂನುಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.