ಕಾವೂರು: ಹಿಂದೂ ಸಮಾಜದ ಕಣ್ಮಣಿ,ಹಿಂದುತ್ವದ ಶಕ್ತಿಯಾಗಿರುವ ,ಲಕ್ಷ ಲಕ್ಷ ಹಿಂದೂಗಳ,ಕಾರ್ಯಕರ್ತರ ಆಶೀವಾರ್ದ ಪಡೆದು ಆಯ್ಕೆಯಾದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರಿಗೆ
ಎಸ್ ಡಿಪಿಐನ ಕಾರ್ಯಕರ್ತನೊಬ್ಬ ಕಾನೂನು ಸಂವಿಧಾನ ಗೌರವಿಸುದಕ್ಕೆ ಉಸಿರಾಡುತ್ತಿದ್ದಾರೆ ಎಂದು ಹೇಳಿದ್ದಾನೆ.ಹಿಂದೂಗಳು ಕರುಣೆ ತೋರಿದ್ದರಿಂದ ನೀವು ದೇಶದಲ್ಲಿದ್ದೀರಿ ಎಂದು ಹೇಳಬಯಸುತ್ತೇನೆ ಎಂದು ಉತ್ತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ತಿರುಗೇಟು ನೀಡಿದ್ದಾರೆ.
ಶಾಸಕರು ಮರಳು ಮಾಫಿಯಾಗೆ ಎಚ್ಚರಿಕೆ ನೀಡಿದ್ದರಿಂದ ಕಂಗಾಲಾಗಿ ತಮ್ಮ ರಕ್ಷಣೆಗೆ ಎಸ್ ಡಿ ಪಿ ಐ,ಕಾಂಗ್ರೆಸ್ ಪಕ್ಷವನ್ನು ಈ ಅಕ್ರಮ ತಂಡಗಳು ಶಾಸಕರ ವಿರುದ್ದ ಛೂ ಬಿಟ್ಟಿರುವಂತೆ ಕಾಣುತ್ತದೆ.ಜನರಿಂದ ಆಯ್ಕೆಯಾದ ಶಾಸಕರಿಗೆ ಜೀವ ಬೆದರಿಕೆ ಹಾಕಿದರೂ ಪೊಲೀಸ್ ಇಲಾಖೆಯು ಕೇಸು ದಾಖಲಿಸದೆ ಕೈ ಕಟ್ಟಿ ಕುಳಿತಿದೆ.ಹಿಂದುತ್ವದ ಶಕ್ತಿಯಾಗಿ,ಹಿಂದೂ ಸಮಾಜಕ್ಕೆ ಕಂಟಕ ಬಂದಾಗ ನೆರವಿಗೆ ಧಾವಿಸುವ ನಮ್ಮ ಶಾಸಕರ ಜತೆ ಪಕ್ಷದ ಲಕ್ಷ ಲಕ್ಷ ಕಾರ್ಯಕರ್ತರು ಜತೆಗಿದ್ದೇವೆ ಎಂದು ಹೇಳಿದ್ದಾರೆ.
ಮರಳು ಮಾಫಿಯ ತಂಡಗಳು ಅಡ್ಡೂರಿನಲ್ಲಿ ಅಕ್ರಮ ಮರಳು ಗಾರಿಕೆ ನಡೆಯುವ ಪ್ರದೇಶಕ್ಕೆ ಯಾರನ್ನೂ ಹೋಗದಂತೆ ಬೆದರಿಸಿ ತಡೆಯುತ್ತಿದ್ದು,ಯಾವುದೇ ವರ್ಗ ಅಲ್ಲಿಗೆ ಹೋಗಲು ಹೆದರುವಂತಾಗಿದೆ.
ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂದು ಅಡ್ಡೂರು ನದಿ ತಟದಲ್ಲಿ ಅದೊಂದು ಬೇರೇಯೇ ನಿಷೇಧಿತ ಪ್ರದೇಶ ಎಂಬಂತ ವಾತಾವರಣ ನಿರ್ಮಿಸಿರುವುದನ್ನು
ಉಲ್ಲೇಖಿಸಿ ಅಪರಾಧಿಗಳ ಗೂಡಾಗಿ ಮಿನಿ ಪಾಕಿಸ್ತಾನವಾಗಿದೆ ಎಂದು ಹೇಳಿರಬಹುದು.
ಸೇತುವೆಗೆ ಹಾನಿಯಾಗುವ ಬಗ್ಗೆ ಮಾತನಾಡದೆ ,ಈ ಪಕ್ಷಗಳು ಇದೀಗ
ಏನಾದರೂ ಆಗಲಿ ಮರಳು ಮಾಫಿಯಾ ರಕ್ಷೆಣೆ ನಮ್ಮ ಕೆಲಸ ಎಂಬಂತೆ ಕಾಂಗ್ರೆಸ್,ಎಸ್ ಡಿಪಿಐ ವರ್ತಿಸುತ್ತಿವೆ .ಸೇತುವೆ ಕೆಳಭಾಗದಲ್ಲಿ ಅಪಾಯಕಾರಿಯಾಗಿ ಮರಳು ತೆಗೆಯುವ ಮೂಲಕ ಸೇತುವೆ ಕುಸಿತಕ್ಕೆ ಕಾರಣವಾಗುವ ಮಾಫಿಯಾ ವಿರುದ್ದ ಶಾಸಕರೊಂದಿಗೆ ಬಿಜೆಪಿ ಕಾರ್ಯಕರ್ತರೂ ಹೋರಾಟ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.