ಬೆಂಗಳೂರು: ಅಕ್ಕ ಮನೆಯಲ್ಲಿಲ್ಲದ ವೇಳೆ ತಂಗಿಯೇ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣ ಕಳವುಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಆರೋಪಿ ತಂಗಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ತನ್ನ ಅಕ್ಕ ಊರಿಗೆ ಹೋಗಿದ್ದ ಸಂದರ್ಭ ನಕಲಿ ಕೀ ಬಳಸಿ ತಂಗಿ 52 ಲಕ್ಷ ರೂ. ನಗದು ಮತ್ತು 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು ಎನ್ನಲಾಗಿದೆ.
ಬಂಧಿತ ಆರೋಪಿಯಿಂದ 65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ 6 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.