ಪಡುಕರೆ ಕಡಲ ತೀರದಲ್ಲಿ ಹೋಮ್ ಸ್ಟೇ ವಿರುದ್ಧ ಗ್ರಾಮಸ್ಥರ ಅಸಮಾಧಾನ ಬೆನ್ನಲ್ಲೆ ತಡರಾತ್ರಿವರೆಗೂ ಬೀಚ್ ನಲ್ಲಿದ್ದ ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು.
ಮಲ್ಪೆ ಪಡುಕೆರೆ ಬೀಚ್ ನಲ್ಲಿ ಮಾ.10ರಂದು ತಡ ರಾತ್ರಿ 2 ಗಂಟೆ ವೇಳೆ ಬೀಚ್ ನಲ್ಲಿದ್ದ ಯುವಕ, ಯುವತಿಯರು ಬೀಚ್ ಬಿಟ್ಟು ತೊರೆಯುವಂತೆ ಸ್ಥಳೀಯರು ಸೂಚಿಸಿದರು. ರಾತ್ರಿ ವೇಳೆ ಪಾರ್ಟಿಯಲ್ಲಿ ನಿರತರಾಗಿದ್ದ 5 ಮಂದಿ ಯುವಕ ಯುವತಿಯರು, ಸ್ಥಳೀಯರು ಆಗಮಿಸುತ್ತಲೇ ಬೀಚ್ ಬಿಟ್ಟು ಓಡಿ ಹೋದರು. ಸಂಜೆ 6 ರ ನಂತರ ಬೀಚ್ ನಲ್ಲಿ ನಿಲ್ಲದಂತೆ ಪ್ರವಾಸಿಗರಿಗೆ ಸೂಚನೆಯನ್ನ ನೀಡಲಾಗಿತ್ತು. ವಾರದ ಹಿಂದೆಯಷ್ಟೆ ಹೋಮ್ ಸ್ಟೇ ವಿರುದ್ಧ ಸಭೆ ನಡೆಸಿ, ಶಾಸಕರಿಗೆ,ಪೊಲೀಸರಿಗೆ ಮನವಿ ಸಲ್ಲಿಸಿದ್ದ ಸ್ಥಳೀಯರು. ಈಗಾಗಲೇ ಈ ಕುರಿತು ಬೀಚ್ ಪಕ್ಕ ಬ್ಯಾನರ್ ಕೂಡ ಅಳವಡಿಸಿರುವ ಸ್ಥಳೀಯರು ಮೋಜು ಮಸ್ತಿ ಹೆಸರಿನಲ್ಲಿ ಡ್ರಗ್ಸ್ ಸೇವನೆ ಆರೋಪ ಬಂದಿದೆ ರಾತ್ರಿ ವೇಳೆ ಪ್ರವಾಸಿಗರು ಬೀಚ್ ನಲ್ಲಿದ್ದರೆ ಸ್ಥಳೀಯರಿಂದ ಕಾರ್ಯಾಚರಣೆ ನಡೆಸಲಾಗುತ್ತದೆ.