ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವಿಶ್ವಧರ್ಮದಆದರ್ಶವು ಮಾನವಕುಲದ ಏಕತೆ, ಸಹಿಷ್ಣುತೆ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಮಹತ್ತರ ಸಂದೇಶವಾಗಿದೆ. ಎಲ್ಲಾ ಧರ್ಮಗಳಲ್ಲಿಯೂ ಅಡಕವಾಗಿರುವ ಸಾಮಾನ್ಯ ಸತ್ಯ ಮತ್ತು ಮಾನವೀಯ ಮೌಲ್ಯಗಳನ್ನು ಅರಿತು ಪರಸ್ಪರ ಗೌರವದಿಂದಬದುಕಬೇಕು ಎಂಬುದು ಸ್ವಾಮಿ ವಿವೇಕಾನಂದರ ದೃಷ್ಟಿಕೋನವಾಗಿತ್ತು.

ಸ್ವಾಮಿ ವಿವೇಕಾನಂದರು ವಿಶ್ವದ ಧರ್ಮಗಳ ನಡುವಿನ ಭಿನ್ನತೆಯನ್ನುಅಲ್ಲ, ಅವುಗಳಲ್ಲಿರುವ ಏಕತೆಯತತ್ವವನ್ನುಜಗತ್ತಿಗೆ ಪರಿಚಯಿಸಿದ ಮಹಾನ್‌ಚಿಂತಕರು. ಧರ್ಮವು ಮಾನವರ ನಡುವೆ ಭೇದವನ್ನು ಉಂಟುಮಾಡುವ ಸಾಧನವಲ್ಲ; ಬದಲಾಗಿ ಮಾನವಕುಲವನ್ನುಒಂದಾಗಿಕಟ್ಟುವ ಶಕ್ತಿ ಎಂಬ ಸಂದೇಶವನ್ನುಅವರುತಮ್ಮಜೀವನ ಮತ್ತು ಉಪದೇಶಗಳ ಮೂಲಕ ಸಾರಿದ್ದಾರೆ.
ಇಂದಿನ ಸಮಾಜದಲ್ಲಿ ಧರ್ಮದ ನಿಜವಾದ ಅರ್ಥವನ್ನು ಅರಿತು ಸಾಮರಸ್ಯ, ಶಾಂತಿ ಮತ್ತು ಸಹೋದರತ್ವವನ್ನು ಬೆಳೆಸುವ ಅಗತ್ಯತೆ ಇದೆ. ಧರ್ಮದ ಸಾರವನ್ನು ಅರಿತಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮತ್ತು ಪರಸ್ಪರ ವಿಶ್ವಾಸ ಬೆಳೆದು ಸಮಗ್ರಅಭಿವೃದ್ಧಿಗೆ ದಾರಿಯಾಗುತ್ತದೆ.
ಯುವಜನರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೈತಿಕ ಮೌಲ್ಯಗಳು, ಸೇವಾ ಮನೋಭಾವ ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಇದೇ ಸ್ವಾಮಿ ವಿವೇಕಾನಂದರು ಕನಸುಗಂಡ ಶಕ್ತಿಶಾಲಿ ಮತ್ತು ಸೌಹಾರ್ದಯುತ ಭಾರತದ ನಿರ್ಮಾಣಕ್ಕೆದಾರಿ ಮಾಡಿಕೊಡುತ್ತದೆ ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಅನುಸಂಧಾನ ಇದರ ಗೌರವ ಶೈಕ್ಷಣಿಕ ನಿರ್ದೇಶಕರಾದಡಾ. ಹೆಚ್. ಎನ್.ಮುರಳೀಧರ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತಮೂರನೇ ಉಪನ್ಯಾಸದಲ್ಲಿ“ ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಆದರ್ಶ”ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಈ ಕಾರ್ಯಕ್ರಮವು ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಇಲ್ಲಿ ಜರುಗಿತು.ಈ ಸಂದರ್ಭದಲ್ಲಿ,ಪ್ರೊ. ಆರ್. ನಾಗಪ್ಪಗೌಡ ಅಧ್ಯಕ್ಷರು, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಧನಂಜಯ ಕುಂಬ್ಳೆ, ಸಹಾಯಕ ಪ್ರಾಧ್ಯಾಪಕರು,ಎಸ್ ವಿ ಪಿ ಕನ್ನಡಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಪನ್ಯಾಸಕರು ಮತ್ತು ಎಸ್ ವಿ ಪಿ ಕನ್ನಡ ಅಧ್ಯಯನ, ಯೋಗವಿಜ್ಞಾನ ಮತ್ತು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗಡೆ ಸ್ವಾಗತಿಸಿ, ಮಂಗಳೂರು ವಿಶ್ವವಿದ್ಯಾಲಯದಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರಾದ ಡಾ. ಸೋಮಣ್ಣ ವಂದಿಸಿದರು. ವಿದ್ಯಾರ್ಥಿ ದುಷ್ಯಂತ್ ಕಾರ್ಯಕ್ರಮವನ್ನು ನಿರೂಪಿಸಿದರು.

