ಚಾಮರಾಜನಗರ: ‘ಗಾಳಿಮಾತು’ ಸಿನಿಮಾ ಗೊತ್ತಿರಬಹುದು. ಹಿರಿಯ ನಟಿ ಲಕ್ಷ್ಮಿ, ಜೈಜಗದೀಶ್, ಹೇಮಾ ಚೌಧರಿ ಸೇರಿದಂತೆ ಪ್ರಮುಖರು ನಟಿಸಿರುವ ಈ ಸಿನಿಮಾ ಗಾಸಿಪ್‌ಗೆ ಸಂಬಂಧಿಸಿದ್ದು. ಕಥಾ ನಾಯಕಿ ಬಗ್ಗೆ ಆಕೆಯ ಸ್ನೇಹಿತೆಯೇ ಹರಡುವ ಗಾಳಿಸುದ್ದಿ ಇಂದ ಆಕೆ ತುಂಬಾ ನೊಂದುಕೊಳ್ಳುತ್ತಾಳೆ, ಆಕೆ ಕುಟುಂಬಸ್ಥರು ಅಪಮಾನಕ್ಕೆ ಒಳಗಾಗುತ್ತಾರೆ.
ಕೊನೆಗೆ ಈ ಗಾಸಿಪ್‌ಗೆ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ! ಇದು ಸಿನಿಮಾದ ಕಥೆ. ಇದೀಗ ಈ ರೀಲ್ ಕಥೆಗೆ ಹೋಲುವ ರಿಯಲ್ ದುರಂತವೊಂದು ಚಾಮರಾಜನಗರದಲ್ಲಿ ನಡೆದಿದೆ. ವಾಟ್ಸಾಪ್ ಮೆಸೇಜ್‌ಗೆ ಹೆದರಿ ಯುವತಿಯೊಬ್ಬಳು ಸೂಸೈಡ್ ಮಾಡಿಕೊಂಡಿದ್ದಾಳೆ!ಮನೆ ಬಾಗಿಲಿಗೆ ಹೆಸರು ಬರೆದು ಸೂಸೈಡ್.
ವಾಟ್ಸಾಪ್ ಮೆಸೇಜ್‌ಗೆ ಹೆದರಿ ಯುವತಿಯೊಬ್ಬಳು ತನ್ನ ಜೀವನವನ್ನೇ ಕೊನೆಗೆೊಳಿಸಿಕೊಂಡಿದ್ದಾಳೆ. ಸಾಯೋ ಮುನ್ನ ತಮ್ಮ ಮನೆ ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದು, ಯುವತಿ ಸೂಸೈಡ್ ಮಾಡಿಕೊಂಡಿದ್ದಾಳೆ!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೀಟನಾಶಕದ ಮಾತ್ರೆ ಸೇವಿಸಿ 24 ವರ್ಷದ ಯುವತಿ ಕವನ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಕವನಾಳ ಸ್ನೇಹಿತೆಗೆ ವಾಟ್ಸಾಪ್‌ನಲ್ಲಿ ಬೇರೆಯವರು ಮೆಸೇಜ್ ಮಾಡಿದ್ದರಂತೆ. ಈ ವಿಚಾರ ಪಕ್ಕದ ಮನೆಯವರಿಗೆ ಗೊತ್ತಾಗಿತ್ತು ಎನ್ನಲಾಗಿದೆ. ಆದರೆ ಈ ಕವನಳ ಸ್ನೇಹಿತೆಗೆ ಅಲ್ಲ, ಖುದ್ದು ಕವನಳಿಗೇ ಬರುತ್ತಿದ್ದ ಮೆಸೇಜ್‌ಗಳು ಅಂತ ಅಪಪ್ರಚಾರ ಮಾಡಿದ್ರಂತೆ.
ಈ ಆರೋಪದಿಂದ ಕವನ ಬೇಸತ್ತಿದ್ದಳಂತೆ. ಆಕೆಯ ಪೋಷಕರು ಕಿರುಕುಳ, ಅಪಮಾನ ಮಾಡುತ್ತಿದ್ದಾರೆಂದು ಮಾನಸಿಕವಾಗಿ ನೊಂದು ಕವನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮೃತ ಕವನಳ ತಾಯಿ ಗಾಯತ್ರಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.