Wednesday, September 11, 2024
HomeUncategorizedಯುವ ಸಾಹಿತಿ ಕೇಶವ ನೆಲ್ಯಾಡಿ ಇವರಿಗೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ...

ಯುವ ಸಾಹಿತಿ ಕೇಶವ ನೆಲ್ಯಾಡಿ ಇವರಿಗೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ ಗೌರವ

ಬೆಂಗಳೂರು ವಿಶ್ವ ದಾಖಲೆಗಾಗಿ ಏಕಕಾಲಕ್ಕೆ ಸಾವಿರಾರು ಕವಿಗಳಿಂದ ವಾಟ್ಸಾಪ್ ಗುಂಪಿನಲ್ಲಿ ಕವಿತೆ ಬರೆಸಿ ಸಾಹಿತ್ಯಿಕ ವಿಭಾಗದಲ್ಲಿ ದಾಖಲೆ ನಿರ್ಮಿಸುವ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಚೇತನ ಫೌಂಡೇಷನ್ ಹಾಗೂ ಕಾವ್ಯಶ್ರೀ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಿದ “ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್” ಕವಿತೆಗಳ ಸಂಕಲನವು ವಿಶ್ವದಾಖಲೆಯಾಗಿದೆ.

ಕೇಶವ ನೆಲ್ಯಾಡಿಯವರು ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ತುಳು ಹಾಡುಗಳಿಗೆ ಸಾಹಿತ್ಯ ಬರೆದು ಹಾಗೂ ಆಲ್ಬಮ್ ಹಾಡುಗಳಿಗೆ ಪ್ರಖ್ಯಾತಿ ಪಡೆದ ಕೇಶವ ನೆಲ್ಯಾಡಿ ಅವರಿಗೆ ಪ್ರಶಸ್ತಿಗಳು ಲಭಿಸಿವೆ. ತುಳು ನಾಟಕ ತುಳು ಕವನ ಕನ್ನಡ ಕವನ, ಕಥೆ, ಸಮಾಜ ಸೇವೆ, ಶೌರ್ಯ ವಿಪತ್ತು ತಂಡದಲ್ಲಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ.

ಆಗಸ್ಟ್ 18 ರಂದು ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ,
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ )ಬೆಂಗಳೂರು ಆಯೋಜಿಸಿದ ವಂದೇ ಮಾತರಂ ಕಾರ್ಯಕ್ರಮದಲ್ಲಿ
“ಕಾವ್ಯ ಚೇತನ” ಪ್ರಶಸ್ತಿ ಪಡೆದಿರುತ್ತಾರೆ.

RELATED ARTICLES
- Advertisment -
Google search engine

Most Popular