Monday, July 15, 2024
Homeರಾಜಕೀಯ25 ವರ್ಷದಲ್ಲೇ ಇವರು ಸಂಸದರು! | ಲೋಕಸಭೆ ಪ್ರವೇಶಿಸುತ್ತಿರುವ ಅತ್ಯಂತ ಕಿರಿಯ ನಾಲ್ಕು ಅಭ್ಯರ್ಥಿಗಳು!

25 ವರ್ಷದಲ್ಲೇ ಇವರು ಸಂಸದರು! | ಲೋಕಸಭೆ ಪ್ರವೇಶಿಸುತ್ತಿರುವ ಅತ್ಯಂತ ಕಿರಿಯ ನಾಲ್ಕು ಅಭ್ಯರ್ಥಿಗಳು!

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಸಂಸದರಾಗಿ ಆಯ್ಕೆಯಾದ ನಾಲ್ವರು ಅತ್ಯಂತ ಕಿರಿಯ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾಜವಾದಿ ಪಕ್ಷದ ಪುಷ್ಪೇಂದ್ರ ಸರೋಜ್‌ ಮತ್ತು ಪ್ರಿಯಾ ಸರೋಜ್‌, ಎಲ್‌ಜೆಪಿಯ ಶಾಂಭವಿ ಚೌಧರಿ ಮತ್ತು ಕಾಂಗ್ರೆಸ್‌ನ ಸಂಜನಾ ಜಾತವ್‌ ಅತ್ಯಂತ ಕಿರಿಯ ಸಂಸದರಾಗಿ ಆಯ್ಕೆಯಾಗಿ ಸಾಧನೆಗೈದಿದ್ದಾರೆ.
ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಸಂಸದರಾಗಿ ಇವರುಗಳು ಆಯ್ಕೆಯಾಗಿದ್ದಾರೆ. 25 ವಯಸ್ಸಿನ ಇವರುಗಳು ಲೋಕಸಭೆ ಪ್ರವೇಶಿಸಲು ಸನ್ನದ್ಧರಾಗಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸಚಿವ ಸಂಪುಟದ ಅಶೋಕ್‌ ಚೌಧರಿಯವರ ಪುತ್ರಿ ಶಾಂಭವಿ ಚೌಧರಿ ಸಮಸ್ತಿಪುರ್‌ ಕ್ಷೇತ್ರದಲ್ಲಿ ಎಲ್‌ಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಸಂಜನಾ ಜಾತವ್‌ ರಾಜಸ್ಥಾನದ ಭರತ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. ರಾಜಸ್ಥಾನದ ಪೊಲೀಸ್‌ ಪೇದೆ ಕಪ್ತಾನ್‌ ಸಿಂಗ್‌ ಅವರನ್ನು ವಿವಾಹವಾಗಿರುವ ಸಂಜನಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 409 ಮತಗಳಿಂದ ಸೋತಿದ್ದರು. ಆದರೆ 25 ವರ್ಷದ ಸಂಜನಾ ಈ ಬಾರಿ ಬಿಜೆಪಿಯ ರಾಮ್‌ಸ್ವರೂಪ್‌ ಕೋಲಿ ಅವರನ್ನು 51,000 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿದ್ದಾರೆ.
ಉತ್ತರ ಪ್ರದೇಶದ ಕೌಶಾಂಬಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಷ್ಪೇಂದ್ರ ಸರೋಜ್‌ ಹಾಲಿ ಬಿಜೆಪಿ ಸಂಸದ ವಿನೋದ್‌ ಕುಮಾರ್‌ ಸೋಂಕರ್‌ ಅವರನ್ನು 1 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಚಿವ ಇಂದರ್‌ಜೀತ್‌ ಸರೋಜ್‌ ಅವರ ಪುತ್ರರಾಗಿರುವ ಪುಷ್ಪೇಂದ್ರ ಸರೋಜ್‌ ಬಿಎಸ್ಸಿ ಮುಗಿಸಿ ರಾಜಕೀಯ ಪ್ರವೇಶಿಸಿದರು.
ಉತ್ತರ ಪ್ರದೇಶದ ಮಚ್ಲಿಶಹರ್‌ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿಯಾಗಿ 25 ವರ್ಷದ ಪ್ರಿಯಾ ಸರೋಜ್‌ ಗೆದ್ದಿದ್ದಾರೆ. ಸಂಸದ ತೂಫಾನಿ ಸರೋಜ್‌ ಅವರ ಪುತ್ರಿಯಾಗಿರುವ ಇವರು ಬಿಜೆಪಿ ಸಂಸದ ಬೋಲಾನಾಥ್‌ ಅವರನ್ನು 35,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

RELATED ARTICLES
- Advertisment -
Google search engine

Most Popular