Monday, July 15, 2024
Homeಅಪರಾಧಯುವತಿಯನ್ನು ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ರೊಮಾನ್ಸ್: ಯುವಕ ಅರೆಸ್ಟ್

ಯುವತಿಯನ್ನು ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ರೊಮಾನ್ಸ್: ಯುವಕ ಅರೆಸ್ಟ್

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಬೈಕ್ ಸವಾರನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾವಲ್ ಬೈರಸಂದ್ರದ ಎಂ.ವಿ. ಲೇಔಟ್ ನಿವಾಸಿ 21 ವರ್ಷದ ಸಿಲಂಬರಸನ್ ಬಂಧಿತ ವ್ಯಕ್ತಿ. ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಹೆಬ್ಬಾಳ ಕಡೆಗೆ ಬರುವಾಗ ಈತ ತನ್ನ ಬೈಕ್ ನಲ್ಲಿ ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿ ರೋಡಿನಲ್ಲೇ ರೊಮಾನ್ಸ್ ಪ್ರದರ್ಶಿಸಿದ್ದಾನೆ. ಈ ವೇಳೆ ಬೈಕಿನ ಹಿಂದಿದ್ದ ಕಾರಿನವರು ವಿಡಿಯೋ ಸೆರೆ ಹಿಡಿದಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬೈಕಿನ ನೋಂದಣಿ ಸಂಖ್ಯೆ ಆಧರಿಸಿ ಸಿಲಂಬರನ್ ನನ್ನು ಬಂಧಿಸಲಾಗಿದೆ. ಬಂಧಿತನ ವಿರುದ್ಧ ಪ್ರಕರಣ ದಾಖಲಾಗಿದ್ದು, ವಾಹನ ಚಾಲನಾ ಪರವಾನಗಿ ಅಮಾನತುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸು  ಮಾಡಲಾಗಿದೆ.   

RELATED ARTICLES
- Advertisment -
Google search engine

Most Popular