Thursday, December 5, 2024
Homeರಾಜ್ಯಪೈಂಟಿಂಗ್‌ ಮಾಡುವಾಗ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು | ಕೊಲೆ ಆರೋಪ

ಪೈಂಟಿಂಗ್‌ ಮಾಡುವಾಗ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು | ಕೊಲೆ ಆರೋಪ

ಬೀದರ್:‌ ಮನೆಗೆ ಪೈಂಟಿಂಗ್‌ ಮಾಡುವಾಗ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ. ಮೃತರ ಯುವಕನನ್ನು ಬೀದರ ತಾಲೂಕಿನ ಮಂದಕನಹಳ್ಳಿ ಗ್ರಾಮದ ಇಮಾವೇಲ್‌ ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಬ್ರಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೂರನೇ ಮಹಡಿಗೆ ಹೋಗುವುದಿಲ್ಲ ಎಂದು ಹೇಳಿದರೂ ಒತ್ತಾಯಪೂರ್ವಕವಾಗಿ ಯುವಕನನ್ನು ಮೇಲೆ ಕಳುಹಿಸಲಾಗಿದೆ. ಮನೆಯ ಮಾಲೀಕ, ಗುತ್ತಿಗೆದಾರ ಹಾಗೂ ಎಂಜಿನಿಯರ್‌ ಸೇರಿ ಕಟ್ಟಡದ ಮೇಲಿಂದ ಯುವಕನನ್ನು ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular