Sunday, July 14, 2024
Homeರಾಜ್ಯಯುವಕರು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕಾಗಿದೆ : ಎ.ಸಿ. ಶಶಿಕಲಾ...

ಯುವಕರು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕಾಗಿದೆ : ಎ.ಸಿ. ಶಶಿಕಲಾ ಶಂಕರಮೂರ್ತಿ

ದಾವಣಗೆರೆ : ಪ್ರಸ್ತುತ ದಿನಮಾನಗಳಲ್ಲಿ ನವ ಯುವಕ, ಯುವತಿಯರು ಕಾಲೇಜುಗಳಲ್ಲಿ ಕೇವಲ ಪಠ್ಯಪುಸ್ತಕ ಅಂಕಪಟ್ಟಿ ಪದವಿಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯೊಂದಿಗೆ ಮುಂದಿನ ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿಯಿಂದ ಬದ್ಧತೆಯಿಂದ ಕಾಳಜಿಯೊಂದಿಗೆ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಾಗಿದೆ ನಮ್ಮ ದೇಶದ ಈ ಲೋಕಸಭಾ ಚುನಾವಣೆ ಐದು ವರ್ಷಕ್ಕೊಮ್ಮೆ ಉತ್ತಮ ಆಡಳಿತಕ್ಕೆ ಪರಿವರ್ತನೆಗೆ ಯಾವುದೇ ಜಾತಿ ಮತದ ಭೇದಭಾವ ಇಲ್ಲದೇ ನಾಗರಿಕರು ಸಾಮಾಜಿಕ ಕಾಳಜಿಯೊಂದಿಗೆ ಮತ
ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿಯವರು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು. ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ಕಲಾ ಕುಂಚ ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಕವಿಗೋಷ್ಠಿ ಸಮಾರಂಭವನ್ನು ತುಳಿಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಚಿತ್ರದುರ್ಗದ ಸುದ್ದಿ ಗಿಡುಗ ದಿನಪತ್ರಿಕೆಯ ಸಂಪಾದಕರಾದ ಶ.ಮಂಜುನಾಥ್ ಮಾತನಾಡಿ ಚುನಾವಣೆ ಆಯೋಗ ನಿಯೋಗ ಚುನಾವಣೆ ಗಾಗಿ ಪೂರ್ವ
ಸಿದ್ಧತೆ ಮಾಡುತ್ತಿರುವುದು ಸಹಜ ಸರ್ವೇಸಾಮಾನ್ಯ ಆದರೆ ಯಾವುದೇ ಸಾರ್ವಜನಿಕ ಸಂಘಟನೆಗಳು ಮಾಡದಂತಹ ಮತದಾನದ ಜಾಗೃತಿ ಕುರಿತು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಕೆಲವು ರಾಜಕೀಯ ಪಕ್ಷಗಳು ಕೇವಲ ಪ್ರಚಾರಕ್ಕೋಸ್ಕರ ಓಟಿಗಾಗಿ ಅಧಿಕಾರಕ್ಕಾಗಿ ತೊಡಗಿಸಿಕೊಂಡು ಸಮಾಜದ ಸಂಸ್ಕಾರ ಸಂಸ್ಕೃತಿ ಸಾಮಾಜಿಕ ಕಾಳಜಿಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಿರಿಯ ಹಿರಿಯ ಕವಿ ಕವಿಯತ್ರಿಯರು ಮತದಾನ ಜಾಗೃತಿ ಕುರಿತು ಒಳ್ಳೊಳ್ಳೆ ಸಂದೇಶಗಳನ್ನು ಅಕ್ಷರ ಜ್ಞಾನದೊಂದಿಗೆ ಅರ್ಥಪೂರ್ಣವಾಗಿ ಕವನ ವಾಚನ ಮಾಡಿದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹಿರಿಯ ಕವಿ ಪರಮೇಶ್ವರಯ್ಯ ವೀರಭದ್ರಯ್ಯ ಮಠದ ಕಲಾಕುಂಚದ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ಹೇಮಾ ಶಾಂತಪ್ಪ ಪೂಜಾರಿ ಮತದಾನದ ಕುರಿತು ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಉದಾಸೀನತೆ ಬಿಟ್ಟು ಕಡ್ಡಾಯವಾಗಿ ಮತ ಚಲಾಯಿಸಬೇಕು ಇದು ನಮ್ಮ ನಿಮ್ಮೆಲ್ಲರ ಆಜನ್ಮ ಹಕ್ಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಮಾತನಾಡಿ ಚುನಾವಣೆ ಆಯೋಗದವರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಮುಖ್ಯವಾಗಿ ಕೆಲವು ಮತದಾರರು ನಿರ್ಲಕ್ಷದಿಂದ ಉದಾಸೀನತೆಯಿಂದ ಮತ ಚಲಾಯಿಸದೆ ಮಧ್ಯಪಾನದೊಂದಿಗೆ ದೂರ ಸೇರುತ್ತಾರೆ ಅಂತವರಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಹಿರಿಯ ನಾಗರಿಕ ಕಾರ್ಡ್ ರದ್ದು ಮಾಡುವ ಕಾನೂನು ತಂದರೆ ಕೆಲವು ಮತದಾರರು ಜಾಗೃತರಾಗುತ್ತಾರೆ ಎಂದು ಹೇಳಿ ಮತದಾನದ ಕುರಿತು ಕವನ ವಾಚನ ಮಾಡಿದರು. ಕುಮಾರಿ ಅಪೇಕ್ಷ ಅನುಷಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪುಷ್ಪ ಮಂಜುನಾಥ್ ಸ್ವಾಗತಿಸಿದರು, ಶೈಲಾ ವಿನೋದ ದೇವರಾಜ ರವರು ಅರ್ಥಪೂರ್ಣ ಕವನ ವಾಚನ ಮಾಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕಲಾಕುಂಚ ಸಿದ್ದ ವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತ ಕಲ್ಲೇಶ್ ಕಚೇರಿ ಕಾರ್ಯದರ್ಶಿ ಎಂ.ಎಸ್.ಪ್ರಸಾದ್ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿ
ಕವನ ವಾಚನ ಮಾಡಿದ ಸರ್ವರಿಗೂ ಅಭಿನಂದನಾ ಪತ್ರ, ಕಾವ್ಯಕುಂಚ ಕವನ ಸಂಕಲನದ ಪುಸ್ತಕದ ಉಡುಗೊರೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಕೆ.ಸಿ. ಉಮೇಶ್ ವಂದಿಸಿದರು.

RELATED ARTICLES
- Advertisment -
Google search engine

Most Popular