ಹೈದರಾಬಾದ್: ತಮ್ಮ ಪೋಸ್ಟ್‌ಗಳಿಗೆ ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಬರಲೆಂದು ಈಗಿನ ಯುವಕರು ತಮ್ಮ ಪ್ರಾಣವನ್ನೇ ಪಣವಿಟ್ಟು ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದಿದ್ದಾರೆ. ಇಂತಹ ಸ್ಟಂಟ್‌ಗಳಿಂದ ಸಾಕಷ್ಟು ಮಂದಿ ಈಗಾಗಲೇ ಪ್ರಾಣ ಕಳೆದುಕೊಂಡಿದ್ದರೂ, ರೀಲ್ಸ್ ಹುಚ್ಚು ಮಾತ್ರ ಯುವಜನತೆಯನ್ನು ಬಿಡುತ್ತಿಲ್ಲ. ಇದೀಗ ಹೈದರಾಬಾದ್‌ನಲ್ಲಿ ಒಬ್ಬ ಚಲಿಸುತ್ತಿರುವ ಬಸ್ಸಿನಡಿ ಏಕಾಏಕಿ ಮಲಗಿ ರೀಲ್ಸ್ ಮಾಡಿದ್ದಾನೆ.
ನಡುರಸ್ತೆಯಲ್ಲಿ ಯುವಕನೊಬ್ಬ ದಿಢೀರನೆ ಬಸ್ಸಿನಡಿ ಮಲಗಿದ್ದಾನೆ. ಬಸ್ಸು ಸಹ ತಕ್ಷಣಕ್ಕೆ ನಿಲ್ಲಿಸಲಾಗದೆ ಆತನ ಮೇಲಿಂದಲೇ ಮುಂದೆ ಸಾಗಿದೆ. ಏನೋ ಅನಾಹುತ ಸಂಭವಿಸಿತು ಎಂದು ನೋಡುವಷ್ಟರಲ್ಲಿ ಯುವಕ ಎದ್ದು ರಸ್ತೆ ಪಕ್ಕಕ್ಕೆ ಹೋಗಿದ್ದಾನೆ. ಬಾಜಿ ಕಟ್ಟಿ ಯುವಕ ಈ ರೀಲ್ಸ್ ಮಾಡಿದ್ದಾನೆ ಎನ್ನಲಾಗಿದೆ.
ಅನೇರಿ ಶಾ ಯಕೃತಿ ಎಂಬ ಎಕ್ಸ್ ಖಾತೆಯಲ್ಲಿ ಜೂ. 21ರಂದು ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, 78,000ಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಯುವಕನ ಈ ಹುಚ್ಚು ಸಾಹಸಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.