Saturday, July 20, 2024
Homeನಿಧನ7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್ ಜೋಡಿ

7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್ ಜೋಡಿ

ಹರಿಯಾಣ: ಲಿವ್‌ ಇನ್‌ ರಿಲೇಷನ್‌ ಶಿಪ್‌ ನಲ್ಲಿದ್ದ ಜೋಡಿಯೊಂದು ಅಪಾರ್ಟ್‌ ಮೆಂಟ್‌ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ.

ಗಾರ್ವಿತ್ (25) ನಂದಿನಿ (22) ಮೃತ ಜೋಡಿ. ಇವರು ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್ಸ್‌ ಆಗಿದ್ದರು.

ತಮ್ಮದೇ ಆದ ಚಾನೆಲ್ ನ್ನು ನಡೆಸುತ್ತಿದ್ದರು ಮತ್ತು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗಾಗಿ ಕಿರುಚಿತ್ರಗಳನ್ನು ಮಾಡುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಜೋಡಿ ತಮ್ಮ ತಂಡದೊಂದಿಗೆ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಬಂದಿದ್ದರು. ರುಹೀಲಾ ರೆಸಿಡೆನ್ಸಿಯ ಏಳನೇ ಮಹಡಿಯಲ್ಲಿನ ಫ್ಲಾಟ್ ನ್ನು ಬಾಡಿಗೆಗೆ ಪಡೆದಿದ್ದರು, ಅಲ್ಲಿ ಅವರು ತಮ್ಮ ಐದು ಸಹ ಸದಸ್ಯರೊಂದಿಗೆ ವಾಸಿಸುತ್ತಿದ್ದರು.

ಶನಿವಾರ(ಏ.13 ರಂದು) ಮುಂಜಾನೆ 6 ಗಂಟೆಯ ಸುಮಾರಿಗೆ ಇಬ್ಬರು ತಮ್ಮ ಅಪಾರ್ಟ್‌ ಮೆಂಟ್‌ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ಹೇಳಿದ್ದಾರೆ. ಚಿತ್ರೀಕರಣ ಮುಗಿಸಿ ತಡವಾಗಿ ಮನೆಗೆ ಮರಳಿದ್ದ ಅವರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು, ಮನಸ್ತಾಪ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣದ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಫೋರೆನ್ಸಿಕ್ಸ್ ತಂಡವು ಸಿಕ್ಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular