Sunday, July 14, 2024
Homeರಾಷ್ಟ್ರೀಯಚುನಾವಣಾ ಸವಾಲು | ಹೆಸರು ಬದಲಾಯಿಸಿಕೊಂಡ ಪವನ್‌ ಕಲ್ಯಾಣ್‌ಗೆ ಸವಾಲು ಹಾಕಿ ಸೋತಿದ್ದ ಅಭ್ಯರ್ಥಿ!

ಚುನಾವಣಾ ಸವಾಲು | ಹೆಸರು ಬದಲಾಯಿಸಿಕೊಂಡ ಪವನ್‌ ಕಲ್ಯಾಣ್‌ಗೆ ಸವಾಲು ಹಾಕಿ ಸೋತಿದ್ದ ಅಭ್ಯರ್ಥಿ!

ಅಮರಾವತಿ: ಸಾಮಾನ್ಯವಾಗಿ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಆಡಿದ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಏನಾದರೂ ಸಬೂಬು ಹೇಳಿ ಕೊಟ್ಟ ಮಾತಿನಿಂದ ತಪ್ಪಿಕೊಳ್ಳುವುದು ಸಹಜ. ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಜನಸೇವಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರನ್ನು ಸೋಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರ ಸಮೀಪದ ಪ್ರತಿಸ್ಪರ್ಧಿ, ವೈಎಸ್‌ಆರ್‌ಸಿಪಿ ಅಭ್ಯರ್ಥಿ ಮುದ್ರಗಡ ಪದ್ಮನಾಭಂ ಅಧಿಕೃತವಾಗಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸವಾಲು ಹಾಕಿದಂತೆ ಪದ್ಮನಾಭಂ ಈಗ ತಮ್ಮ ಹೆಸರನ್ನು ಪದ್ಮನಾಭ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದಾರೆ. ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್‌ ಕಲ್ಯಾಣ್‌ ಅವರನ್ನು ಸೋಲಿಸುವುದಾಗಿ ಪದ್ಮನಾಭಂ ಸವಾಲು ಹಾಕಿದ್ದರು. ಅದರಂತೆ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ.
ನನ್ನ ಹೆಸರು ಬದಲಾಯಿಸಲು ಯಾರೂ ಒತ್ತಾಯಿಸಿಲ್ಲ. ನನ್ನ ಸ್ವ ಇಚ್ಛೆಯಿಂದ ಹೆಸರು ಬದಲಿಸಿಕೊಂಡಿರುವುದಾಗಿ ರೆಡ್ಡಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular