Monday, December 2, 2024
HomeSportಕ್ರೀಡೆಕ್ರೀಡೆಯ ಮೂಲಕ ಅಶಕ್ತರ ಬಾಳಿನಲ್ಲಿ ಬೆಳಕು ಮೂಡಿಸುವ ಯುವವಾಹಿನಿ ಕಾರ್ಯ ಶ್ಲಾಘನೀಯ : ಅರ್ಜುನ್ ಭಂಡಾರ್ಕರ್

ಕ್ರೀಡೆಯ ಮೂಲಕ ಅಶಕ್ತರ ಬಾಳಿನಲ್ಲಿ ಬೆಳಕು ಮೂಡಿಸುವ ಯುವವಾಹಿನಿ ಕಾರ್ಯ ಶ್ಲಾಘನೀಯ : ಅರ್ಜುನ್ ಭಂಡಾರ್ಕರ್

ಬಂಟ್ವಾಳ : ಈ ನಾಡು ಕಂಡ ಶ್ರೇಷ್ಠ ಸಮಾಜಸೇವಕ ಕೀರ್ತಿಶೇಷ ಕೆ.ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ನಡೆಯುವ ಕ್ರೀಡೆಯ ಮೂಲಕ ಅಶಕ್ತರಿಗೆ ಸಹಾಯಹಸ್ತ ನೀಡುವ ಯುವವಾಹಿನಿ ಕಾರ್ಯ ಇತರರಿಗೂ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದೆ ಎಂದು ಸಮಾಜಸೇವಕ ಸೇವ್ ಲೈಪ್ ಚಾರಿಟೇಬಲ್ ಟ್ರಸ್ಸ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ತಿಳಿಸಿದರು.

ಅವರು ದಿನಾಂಕ 27.10.2024 ರಂದು ಬಂಟ್ವಾಳ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಬೈದಶ್ರೀ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ, ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಕ್ರಿಕೆಟ್ ಪಂದ್ಯಾಟದ ಟ್ರೋಪಿ ಅನಾವರಣಗೊಳಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ , ಲೋಹಿತ್ ಆಕಾಶಭವನ ಕ್ರಿಕೆಟ್ ಪಂದ್ಯಾಟ ಆಡುವ ಮೂಲಕ ಪಂದ್ಯಾಟ ಉದ್ಘಾಟಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ರಾಜೇಶ್ ಸುವರ್ಣ, ರಾಜೇಶ್ ಮೆಸ್ಕಾಂ, ಅರುಣ್ ಕುಮಾರ್, ಹರೀಶ್ ಕೋಟ್ಯಾನ್ ಕುದನೆ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಕ್ರೀಡಾ ನಿರ್ದೇಶಕ ಮಧುಸೂದನ್ ಮದ್ವ ಸ್ವಾಗತಿಸಿದರು, ಸಂಚಾಲಕ ವಿಕ್ರಮ್ ಶಾಂತಿ ಧನ್ಯವಾದ ನೀಡಿದರು. ಸಮಾರಂಭದ ಆದ್ಯಕ್ಷತೆ ವಹಿಸಿದ್ದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular