ಬಂಟ್ವಾಳ:ಇಲ್ಲಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಅಲ್ ಖಾದಿಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಲ್ ಖಾದಸ ಆಂಗ್ಲ ಮಾಧ್ಯಮ ಶಾಲೆ ಸಹಭಾಗಿತ್ವದಲ್ಲಿ ವಾಮದಪದವು ವಲಯ ಮಟ್ಟದ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾಟ ಶನಿವಾರ ನಡೆಯಿತು. ಶಾಲೆಯ ಸಂಸ್ಥಾಪಕ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಿವೃತ್ತ ಶಿಕ್ಷಕ ಬಿ. ಎಂ. ಮಹಮ್ಮದ್ ತುಂಬೆ, ವಗ್ಗ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸಮಿಯುಲ್ಲಾ, ವಗ್ಗ ಪ್ರೌಢಶಾಲೆ ಮುಖ್ಯಶಿಕ್ಷಕ ಶೇಕ್ ಆದಂ ಸಾಹೇಬ್ ಮಾತನಾಡಿದರು. ಟ್ರಸ್ಟಿ ಇಸ್ಮಾಯಿಲ್, ಸಂಚಾಲಕ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ವಲಯ ಮೇಲ್ವಿಚಾರಕ ಜಿನ್ನಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಮುಖ್ಯಶಿಕ್ಷಕ ಮುಹಮ್ಮದ್ ಶಿಹಾಬ್ ಮತ್ತಿತರರು ಇದ್ದರು. ಮುಖ್ಯಶಿಕ್ಷಕ ಮುಹಮ್ಮದ್ ಶಿಹಾಬ್ ಸ್ವಾಗತಿಸಿ, ಪ್ರಾಂಶುಪಾಲ ಹ್ಯಾರಿಸ್ ಬಾಂಬಿಲ ವಂದಿಸಿದರು. ವಿದ್ಯಾಥರ್ಿನಿ ಝಬಿವುಲ್ಲಾ ಕಾರ್ಯಕ್ರಮ ನಿರೂಪಿಸಿದರು.