ಹಳೆಯಂಗಡಿ:ರೈಲ್ವೇ ಗೇಟ್ ನಿರ್ವಹಣೆ ಕಾಮಗಾರಿ-ಅ.1ರ ರಾತ್ರಿಯಿಂದ 2ರ ಬೆಳಗಿನವರೆಗೆ ವಾಹನ ಸಂಚಾರ ಸ್ಥಗಿತ

0
6

ಮುಲ್ಕಿ: ಹಳೆಯಂಗಡಿಯ ಇಂದಿರಾನಗರದಿಂದ ರಾ.ಹೆ.66 ಸಂಪರ್ಕಿಸುವ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ-89)ನಲ್ಲಿ ರಸ್ತೆ ಮೇಲ್ಮೈ ಸುಧಾರಣೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ. 1ರ ರಾತ್ರಿ 8ರಿಂದ ಅ.2ರ ಬೆಳಗ್ಗೆ 8ರವರೆಗೆ ಒಂದು ರಾತ್ರಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೊಂಕಣ ರೈಲ್ವೇ ಆದೇಶಿಸಿದೆ.
ಕೊಂಕಣ ರೈಲ್ವೇ ವ್ಯಾಪ್ತಿಯ ಕಿ.ಮೀ. 727/1-2ರಲ್ಲಿರುವ ಎಲ್‌ಸಿ-89ರಲ್ಲಿ ರಸ್ತೆ ಮೇಲ್ಮೈ ಸುಧಾರಿಸುವ ಉದ್ದೇಶದಿಂದ ರಬ್ಬರೈಸ್ಟ್ ಪೇವರ್‌ಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಈ ಅವಧಿಯಲ್ಲಿ ಹಳೆಯಂಗಡಿ ಮಾರ್ಗವಾಗಿ ತೋಕೂರು, ಕಿನ್ನಿಗೋಳಿ, ಭಾಗಕ್ಕೆ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.