Saturday, June 14, 2025
HomeUncategorizedವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಗಣನೀಯ ಪಾತ್ರ : ಪ್ರೊಫೆಸರ್ ಪ್ರಕಾಶ್ ಪಿಂಟೋ

ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಗಣನೀಯ ಪಾತ್ರ : ಪ್ರೊಫೆಸರ್ ಪ್ರಕಾಶ್ ಪಿಂಟೋ

ಪ್ರಸ್ತುತ ಆಧುನಿಕ ಕಾಲದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ಗಣನೀಯ ಪಾತ್ರವನ್ನು ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ ಎಂದು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಡೀನ್ ಕಾಲೇಜಿನ ಪ್ರೊಫೆಸರ್ ಪ್ರಕಾಶ್ ಪಿಂಟೋ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ – ಚಾಲಿತ ಜಾಗತಿಕ ವಿದ್ಯಮಾನಗಳು’ ಎಂಬ ವಿಷಯದ ಕುರಿತು ಬ್ಯಾಂಕ್ ಆಫ್ ಬರೋಡಾ ಚೇರ್, ಕೆನರಾ ಬ್ಯಾಂಕ್ ಚೇರ್ ಮತ್ತು ಯೂನಿಯನ್ ಬ್ಯಾಂಕ್ ಚೇರ್ ಸಂಯೋಜನೆಯೊಂದಿಗೆ ಎರಡು ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಸಮರೂಪಿನಲ್ಲಿ ಮ್ಯಾಗ್ನಂ ಪೆಸ್ಟ್ ನ ಸಮಾರೋಪ ಭಾಷಣದಲ್ಲಿ ಮಾತನಾಡುತ್ತಿದ್ದರು.
ದಕ್ಷತೆ ಹೆಚ್ಚಳ, ಕಡಿಮೆ ವೆಚ್ಚ ಮತ್ತು ನಿಖರವಾದ ಅಂಕಿ ಸಂಖ್ಯೆಗಳ ಕ್ರೋಡಿಕರಣ ಇತ್ಯಾದಿ ಕ್ಷಿಪ್ರವಾದ ಬೆಳವಣಿಗೆಯು ಕೃತಕ ಬುದ್ಧಿಮತ್ತೆಯಿಂದ ಹೆಚ್ಚುತ್ತಿದೆ. ಇದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತು ಮತ್ತು ಬಳಕೆ ಸೇವೆಗಳ ಬಳಕೆಗೆ ಸಮಯವನ್ನು ಕಡಿಮೆಗೊಳಿಸುತ್ತಿದೆ. ಜಾಗತಿಕವಾಗಿ ಅಪಾರವಾದ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದೇವೆ. ಇದರಿಂದ ವಾಣಿಜ್ಯ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳು ಮತ್ತು ಸಂಶೋಧನೆಗಳು ನಡೆಯುತ್ತಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಪುಟ್ಟಣ್ಣ ಕೆ. ಹಾಗೂ ಜಿಂಬಾಬ್ವೆ ದೇಶದ ವಿನ್ನಿ ಸಿಂಬೋಗಿಲೆ ಬಾಜಿಲಾ ರವರು ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು.
ವೇದಿಕೆಯಲ್ಲಿ ಪ್ರೊಫೆಸರ್. ವೈ. ಮುನಿರಾಜು, ಪ್ರೊಫೆಸರ್. ಈಶ್ವರ ಪಿ, ಪ್ರೊಫೆಸರ್ ವೇದವ ಪಿ, ಪ್ರೊಫೆಸರ್. ಪರಮೇಶ್ವರ, ವಾಣಿಜ್ಯ ಸಂಘದ ಸ್ಟಾಫ್ ಕೋರ್ಡಿನೇಟರ್ ಗುರುರಾಜ್ ಪಿ, ವೈಶಾಲಿ ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ್ ಎಸ್, ನಿರ್ಮಲ ಬಿ, ಕಾವ್ಯ ಎಚ್. ಎಸ್, ಸುದೀಪ್ ಎಚ್.ಆರ್, ಮಹಮದ್ ಫಾರೀಸ್, ಸಾರ್ಥಕ್ ಟಿ ಮತ್ತು ಅಚ್ಚಯ್ಯ ಡಿ.ಪಿ. ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಗಳಿಗೆ ಬೆಸ್ಟ್ ಪೇಪರ್ ಅವಾರ್ಡ್ ವಿತರಿಸಲಾಯಿತು. ಇದರ ಪಟ್ಟಿಯನ್ನು ಸಿಸ್ಟರ್ ಕ್ಲಾರಾbರೋಡ್ರಿಗ್ರಸ್ ವಾಚಿಸಿದರು. ನಂತರ ಮ್ಯಾಗ್ನಂ ಪೆಸ್ಟ್ ನಲ್ಲಿ ವಿವಿಧ ಇವೆಂಟ್ಗಳಲ್ಲಿ ವಿಜೇತರಾದವರಿಗೆ ಪ್ರಥಮ ಮತ್ತು ದ್ವಿತೀಯ ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಯಿತು . ಹಾಗೂ ಸಮಗ್ರ ಪ್ರಶಸ್ತಿಯನ್ನು ಪ್ರಥಮ ವಿಭಾಗವನ್ನು ಸೈಂಟ್ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇಂಫಾರ್ಮೇಷನ್ ಟೆಕ್ನಾಲಜಿ, ಬೀರಿ- ಮಂಗಳೂರು ಮತ್ತು ದ್ವಿತೀಯ ವಿಭಾಗದಲ್ಲಿ ಎ. ಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು ಇದರ ವಿಜೇತರ ಪಟ್ಟಿಯನ್ನು ತೇಜಸ್ವಿನಿ ಪಿ.ಕೆ. ವಾಚಿಸಿದರು.
ಅಂತರಾಷ್ಟ್ರೀಯ ಸಮ್ಮೇಳನದ ವರದಿಯನ್ನು ಅಮೃತ ವಾಚಿಸಿದರೆ ಮ್ಯಾಗ್ನಂ ಪೆಸ್ಟ್ ವರದಿಯನ್ನು ಸಾರ್ಥಕ ಮಂಡಿಸಿದರು.
ಅನಂತ್ ಆರಿಫಾ ಸ್ವಾಗತ ಭಾಷಣ ಮಾಡಿದರೆ, ಗುರುರಾಜ್ ಪಿ ಧನ್ಯವಾದ ಸಮರ್ಪಣೆಯನ್ನು ಗೈದರು. ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ಎಂ. ಆರ್. ನಿರ್ವಹಿಸಿದ್ದರು.

RELATED ARTICLES
- Advertisment -
Google search engine

Most Popular