ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಕಂದಾವರ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸೌಹಾರ್ಧನಗರದ ಕಾಲಿನಿಗಳ ಅಭಿವೃದ್ದಿ ಗೆ 45.00ಲಕ್ಷ ಮಂಜೂರಾಗಿದ್ದು, ಹದೆಗೆಟ್ಟ ರಸ್ತೆಗಳು ಬಹಳ ಸಮಯದಿಂದ ದುರಸ್ಥಿ ಕಾಣದೇ ಅವರ ಮನವಿಗೆ ಸ್ಪಂದಿಸಿ ರಸ್ತೆಗಳ ಅಭಿವೃದ್ದಿ ಗೆ 45.00ಲಕ್ಷ ರೂ.ಅನುದಾನದ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಹಾಗೂ ಈ ಭಾಗದ ಕಾಂಗ್ರೆಸ್ ಅಭ್ಯರ್ಥಿ ಇನಾಯಿತ್ ಅಲಿಯವರು ಶಂಕುಸ್ಥಾಪನೆಯನ್ನು ನೇರವೇರಿಸಿದರು. ಈ ಸಮಾರಂಭದಲ್ಲಿ ಮಾತನಾಡಿದ ಶ್ರೀ ಐವನ್ ಡಿʼಸೋಜಾರವರು ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ರಾಜಕೀಯವಿರುವುದಿಲ್ಲ ಅಭಿವೃದ್ದಿ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತದೆ. ಒಂದು ಕಾಂಕ್ರೀಟ್ ರಸ್ತೆ ನಿರ್ಮಾಣವಾದರೆ ಅದು 30ರಿಂದ 40ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಮತ್ತು ಅದು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಾಗಿ ಉಪಯೋಗವಾಗುತ್ತದೆ. ರಸ್ತೆಗಳ ಅಭಿವೃದ್ದಿ ಮಾಡುವುದು, ದಾರಿದೀಪ, ಚರಂಡಿ ಮೂಲಭೂತ ಸೌಕರ್ಯ ಒದಗಿಸಿಕೊಡುವ ಜವಬ್ದಾರಿ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರನಿಗೆ ಸಿಗಬೇಕಾಗಿದ್ದು ಇದರ ಸದುಪಯೋಗವನ್ನು ಪಡೆಯುವಾಗ ಕಾನೂನು ಪಾಲನೆ ಮಾಡುವುದು ಅವಶ್ಯಕತೆ ಇದೆ ಎಂದು ಐವನ್ ಡಿಸೋಜಾ ತಿಳಿಸಿದರು. ಈ ಕಾಮಗಾರಿಗಳಿಗೆ ಅನುದಾನವನ್ನು ಒದಗಿಸಿಕೊಟ್ಟಂತಹ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ.ಶಿವಕುಮಾರ್ರವರನ್ನು ಅಭಿನಂದಿಸಿದ ಶ್ರೀ ಐವನ್ ಡಿʼಸೋಜಾ ಇವರು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿ ಕಾಮಗಾರಿಗಳು ಸತತವಾಗಿ ನಡೆಯುತ್ತಾ ಇರುವುದು ರಾಜ್ಯದ ಅಭಿವೃದ್ದಿಯ ಮತ್ತು ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿದೆ ಎಂದು ಶ್ರೀ ಐವನ್ ಡಿʼಸೋಜಾ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಇವರು ಈ ಒಂದು ಕ್ಷೇತ್ರಕ್ಕೆ ಬಹಳಷ್ಟು ದೊಡ್ಡ ಅನುದಾನವನ್ನು ಒದಗಿಸಕೊಟ್ಟ ಐವನ್ ಡಿʼಸೋಜಾ ಇವರು ಇನ್ನೂ ಮುಂದೆಯೂ ಅವರ ಸಹಕಾರವನ್ನು ಈ ಪ್ರದೇಶಕ್ಕೆ ಬಯಸುದಾಗಿಯೂ, ಸಂಪರ್ಕವೇ ಇಲ್ಲದೇ ಇರುವ ಈ ರಸ್ತೆಯ ದುರಸ್ಥಿಗೆ ಒದಗಿಸಿದಂತಹ ಅನುದಾನ ಅತೀ ಪ್ರಮುಖವಾಗಿದ್ದು ಈ ನೈಜವಾದ ಬೇಡಿಕೆಗೆ ಐವನ್ ಡಿʼಸೋಜಾ ಸ್ಪಂದಿಸಿರುವುದು ನನಗೆ ತುಂಭಾ ಹೆಮ್ಮೆಯಾಗಿದೆ ಎಂದು ತಿಳಿಸಿ ಐವನ್ ಡಿಸೋಜಾರವರಿಗೆ ಅಭಿನಂದಿಸಿದರು.
ಈ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ವಿಜಯ ಗೋಪಾಲ್ ಸುವರ್ಣ ಮಾತನಾಡಿ ನಮ್ಮ ಬೇಡಿಕೆಗೆ ಐವನ್ ಡಿʼಸೋಜಾ ಸ್ಪಂದಿಸಿರುವುದು ಐವನ್ ಡಿಸೋಜಾರವರಿಗೆ ಧನ್ಯವಾದ ಸಲ್ಲಿಸಿದರು.
ಪ್ರಾರಂಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಿರಾಜ್ ಬಜ್ಪೆ ಇವರು ಸ್ವಾಗತಿಸಿದರು ನಿಸಾರ್ ಕರಾವಳಿ ವಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ಇನಾಯತ್ ಅಲಿ :ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಸಿರಾಜ್ ಬಜ್ಪೆ :ಅಧ್ಯಕ್ಷರು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ,ದೇವದಾಸ್ :ದ.ಸಂ.ಸ .ರಾಜ್ಯ ಸಂಚಾಲಕರು ವಿಜಯ ಗೋಪಾಲ ಸುವರ್ಣ : ಅಧ್ಯಕ್ಷರು ವಲಯ ಕಾಂಗ್ರೆಸ್ ಕಂದಾವರ ಗ್ರಾ ಪಂ ಜಯಲಕ್ಷ್ಮಿ : ಅಧ್ಯಕ್ಷರು ಮಹಿಳಾ ಕಾಂಗ್ರೆಸ್ ,ಗುರುಪುರ ಬ್ಲಾಕ್ .ನಿಸಾರ್ ಕರಾವಳಿ :INTUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಮುಖಂಡರುಗಳಾದ ದೀಪಕ್ ಪೆರ್ಮುದೆ ,ನವಾಜ್ ಭಟ್ರಕೆರೆ ,ಸಲೀಮ್ ಅಹಮದ್ ,ಜಲಾಲ್ ಮರವೂರು,NFC ಅಧ್ಯಕ್ಷರಾದ ಹಕೀಮ್ ಪ್ಯಾರಾ ,ಹಮೀದ್ ಕೂಲ್ ಪಾಯಿಂಟ್ ,ಹಕೀಮ್ ಕಾಂಟ್ರಾಕ್ಟರ್ ,ಸಿರಾಜ್ ಕೊಳಂಬೆ ,ಅಜ್ಮಲ್ ,ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಜ್ ಕೊಳಂಬೆ ಮತ್ತು ನಿಸಾರ್ .ಅಶ್ರಫ್ ಕೊಳಂಬೆ .ಕೃಷ್ಣಪ್ಪ ಅಮೀನ್ :ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು .ಪುರುಷೋಥಮ ಚಿತ್ರಪುರ :ಅಧ್ಯಕ್ಷರು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ .ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಮಾಲತಿ ,ಶಾಂತ,ದೇವಪ್ಪ ,ಸುನಿಲ್ ಮತ್ತು ವಿಜಯ PDO ಸೌಮ್ಯ
ವಕೀಲರಾದ ವಿನೋದರ ಪೂಜಾರಿ , ಭಾಸ್ಕರ್ ಮಲ್ಯ ,ಕೋರ್ದಬ್ಬು ದೇವಸ್ಥಾನದ ಅಧ್ಯಕ್ಷರಾದ ಜಯಂತ ಮಾಸ್ಟರ್, ದಲಿತ ಮುಖಂಡರುಗಳಾದ ನಾರಾಯಣ ,ಮಂಜಪ್ಪ ಪುತ್ರನ್ ,ಕಿರಣ್ ಗುಂಡಪದವು ,ನಾಸಿರ್ ಅದ್ಯಪಾಡಿ ,ಸತೀಶ್ ಅದ್ಯಪಾಡಿ . ಮುಂತಾದವರು ಉಪಸ್ಥಿತರಿದ್ದರು.