ಪೊಯೆಟಿಕಾ ಕವಿಗೋಷ್ಠಿ 45 ಮತ್ತು ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಆಟಿಕೆಗಳ ವಿತರಣೆ

0
31

ಮುಲ್ಕಿ: ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಯೆಟಿಕಾ ಕವಿಗಳ ವತಿಯಿಂದ ಪೊಯೆಟಿಕಾ ಕವಿಗೋಷ್ಠಿ 45 ಹಾಗೂ ಶಾಲೆಯ ಎಲ್ಲಾ ಮಕ್ಕಳಿಗೆ ಶೂ, ಸಾಕ್ಸ್, ಹಾಗೂ ಆಟಿಕೆಗಳ ವಿತರಣಾ ಕಾರ್ಯಕ್ರಮ ನಡೆಯಿತು. ಬ್ಯಾಂಡ್ ವಾದ್ಯದ ಮೂಲಕ ಅತಿಥಿಗಳನ್ನು ಬರಮಾಡಿಕೊಂಡ ನಂತರ ಶಾಲಾ ಮಕ್ಕಳಿಂದ ಪ್ರಾರ್ಥನಾ ಗೀತೆ ಮತ್ತು ಸ್ವಾಗತ ನೃತ್ಯದ ಮೂಲಕ ಎಲ್ಲರನ್ನು ಸ್ವಾಗತಿಸಲಾಯಿತು. ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯ ಸಲಹೆದಾರರಾದ ವಂದನೀಯ ಭಗಿನಿ ಶಾಲೆಟ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ ಸರ್ವ ಧರ್ಮ ಸಂಗಮದ ಮ್ಯಾನೆಜಿಂಗ್ ಟ್ರಸ್ಟಿ ಹೇಮಾಚಾರ್ಯ, ಕಾರ್ಯಕ್ರಮದ ಸಂಘಟಕರು ಆದ ನವೀನ್ ಪಿರೇರಾ ಸುರತ್ಕಲ್, ಕವಿಗೋಷ್ಠಿಯ ಅಧ್ಯಕ್ಷರಾದ ಮನ್ಸೂರ್ ಮೂಲ್ಕಿ, ಮೆಡಲಿನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಜಸಿಂತಾ ಡಿಸೋಜ, ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಸುಮಾ, ಹಾಗೂ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸಿಸ್ಟರ್ ಪ್ರೆಸಿಲ್ಲಾ ಫ್ಲೋರಿ ಡಿಸೋಜ, ಉಪಸ್ಥಿತರಿದ್ದರು. ಅತಿಥಿಗಳನ್ನು ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೆಸಿಲ್ಲಾ ಫ್ಲೋರಿ ಡಿಸೋಜ, ಅವರು ಆತ್ಮೀಯವಾಗಿ ಸ್ವಾಗತಿಸಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ರುವಾರಿ ಹಾಗೂ ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ ಸುರತ್ಕಲ್ ರವರಿಗೆ ಶಾಲವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ದಾಯ್ಜಿವರ್ಲ್ಡ್ ನಿರ್ದೇಶಕ ಹೇಮಾಚಾರ್ಯ ಮತ್ತು ಕಾರ್ಯಕ್ರಮದ ಅಧ್ಯಕ್ಷರಾದ ಸಿ.ಶಾಲೆಟ್ ಡಿಸೋಜರವರು ಪೊಯೆಟಿಕಾದ ಸಾಹಿತಿಕ ಕೊಡುಗೆ ಮಾತ್ತು ಜನಪರ ಕಾಳಜಿಯನ್ನು ಕೊಂಡಾಡಿದರು.

ಮೆಡಲಿನ್ ಹಳೇವಿಧ್ಯಾರ್ಥಿ ಹಾಗೂ ಪೊಲೀಸ್ ಅಧಿಕಾರಿ ಯಾಗಿರುವ ಮನ್ಸೂರ್ ಮುಲ್ಕಿಯ ನೇತ್ರತ್ವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪ್ರಖ್ಯಾತ ಕವಿಗಳಾದ ಜೊಸ್ಸಿ ಪಿಂಟೋ, ಹೇಮಾಚಾರ್ಯ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಮರಿಯ ಜಾರ್ಜ್ ಕುಲ್ಶೇಕರ ಹಾಗೂ ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ ಸುರತ್ಕಲ್ ತಮ್ಮ ತಮ್ಮ ಕವಿತಾ ವಾಚನ ಮಾಡಿದರು. ಕವಿಗೋಷ್ಠಿಯ ನಂತರ ಶ್ರೀಮಾನ್ ಎಡ್ವರ್ಡ್ ಲೋಗೋ ಮಿಮಿಕ್ರಿ ಮೂಲಕ ಮಕ್ಕಳನ್ನು ಮಂತ್ರಮುಗ್ದಗೊಳಿಸಿ ರಂಜಿಸಿದರು. ಮಕ್ಕಳಿಗೆ ಶೂ ಸಾಕ್ಸ್ ಹಾಗೂ ಆಟಿಕೆಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು, ಸಹ ಶಿಕ್ಷಕಿ ಕೊನಿ ಪಿ ವಾಜ್ ನಿರೂಪಿಸಿದರು. ಸಹ ಶಿಕ್ಷಕಿಯಾದ ಲವೀನಾ ಜಾಯ್ಸ್ ರೋಡ್ರಿಗಸ್ ಧನ್ಯವಾದ ಸಮರ್ಪಿಸಿದರು. ಆಟಿಕೆಗಳನ್ನು ಪಡೆದ ಮಕ್ಕಳ ಮುಖದಲ್ಲಿ ಸಂತಸದ ಅಲೆಗಳು ಎದ್ದು ಕಾಣುತ್ತಿದ್ದು, ಸ್ವರ್ಗದಂತಹ ವಾತಾವರಣ ನೆರೆದಿದ್ದವರ ಮನ ಸೂರೆಗೊಳ್ಳುವಂತಿತ್ತು..

LEAVE A REPLY

Please enter your comment!
Please enter your name here