ಉಜಿರೆ : ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ (ರುಡ್‌ಸೆಟ್), ಸ್ವ-ಉದ್ಯೋಗ ಆಕಾಂಕ್ಷಿಗಳಿಗಾಗಿ ಹತ್ತು ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ’ ತರಬೇತಿ ಶಿಬಿರವನ್ನು ಆಯೋಜಿಸಿದೆ.
ತರಬೇತಿಯ ವಿವರಗಳು :
ಈ ತರಬೇತಿಯಲ್ಲಿ ವಿವಿಧ ಬಗೆಯ ಮಸಾಲಾ ಪೌಡರ್ ತಯಾರಿಕೆ, ಉಪ್ಪಿನಕಾಯಿ, ಹಪ್ಪಳ, ವೈವಿಧ್ಯಮಯ ಜ್ಯೂಸ್‌ಗಳು, ಫಾಸ್ಟ್ ಫುಡ್, ಮೊಮೊಸ್ ಹಾಗೂ ಸ್ಯಾಂಡ್‌ವಿಚ್ ತಯಾರಿಕೆಯ ಕುರಿತು ಪರಿಣಿತರಿಂದ ಪ್ರಾಯೋಗಿಕ ಮಾಹಿತಿ ನೀಡಲಾಗುವುದು. ತರಬೇತಿಯು ದಿನಾಂಕ 09-03-2026 ರಿಂದ 18-03-2026 ರವರೆಗೆ ನಡೆಯಲಿದೆ.
ಅರ್ಹತೆಗಳು :
18 ರಿಂದ 50 ವರ್ಷ ವಯೋಮಿತಿಯೊಳಗಿನ ಗ್ರಾಮೀಣ ಭಾಗದ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ವಿಶೇಷತೆ :
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ‘AA’ ಮಾನ್ಯತೆ ಪಡೆದಿರುವ ಈ ಸಂಸ್ಥೆಯಲ್ಲಿ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಯ್ದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.rudsetujire.com ಮೂಲಕ ಅಥವಾ QR ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದು.
ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು 6364561982 ಸಂಖ್ಯೆಗೆ ಸಂದೇಶ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ ಸಂಖ್ಯೆ: 08256-236404 ಅಥವಾ ಮೊಬೈಲ್: 9902594791, 9591044014, 9980885900, 6364561982 ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

