ವಿಧಾನಪರಿಷತ್‌ ಶಾಸಕ ಐವನ್‌ ಡಿʼಸೋಜಾರವರ ನೇತೃ ತ್ವದಲ್ಲಿ 11ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ ಮತ್ತು ಗೂಡುದೀಪ ಸ್ಪರ್ಧೆ

0
72

ಕರ್ನಾಟಕ ಸರಕಾರದ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಸಂಭ್ರಮಾಚರಣೆ, ಕ್ರಿಸ್ಮಸ್‌ ಹಬ್ಬ ಹಾಗೂ ರಂಜಾನ್‌ ಹಬ್ಬಗಳನ್ನು ಸರ್ವಧರ್ಮಿಯರು ಸೇರಿಕೊಂಡು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ.

 ಈ ಭಾರಿ 11ನೇ ವರ್ಷದ ಸಲುವಾಗಿ ಇದೇ ತಾ| 20-10—2025ರಂದು ಸೋಮವಾರ ನರಕಚತುರ್ದಶಿ ದಿನದಂದು ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದ  ಸಭಾಭವನದಲ್ಲಿ ಸಂಜೆ ಗಂಟೆ 3:00ರಿಂದ ರಾತ್ರಿಯವರೆಗೆ ದೀಪಾವಳಿ ಹಬ್ಬದ ಅಚರಣೆಯ ಪ್ರಯುಕ್ತ, ಜಾನಪದ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಯನ್ನು ನಡೆಸಲಿದ್ದಾರೆ.

ಸಂಜೆ 3:30ಕ್ಕೆ ದೀಪಾವಳಿ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮ ಉದ್ಘಾಟಕರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ      ಶ್ರೀ ಅನಂತಪಧ್ಮನಾಭ ಅಸ್ರಣ್ಣನವರು ಹಾಗೂ ಇತರ ಸಾಮಾಜಿಕ ನೇತಾರರು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಾನಪದ ನೃತ್ಯ ಸ್ಪರ್ಧೆ: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ 15 ವರ್ಷಗಳ ಮೇಲ್ಪಟ್ಟ ಎಲ್ಲಾ ತಂಡಗಳಿಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ಪ್ರಥಮ ಬಹುಮಾನ  ರೂ. 10,000/-, ದ್ವಿತೀಯ ಬಹುಮಾನ ರೂ.7,000/-, ತೃತೀಯ ಬಹುಮಾನ ರೂ.5,000/- ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಚಿತ್ರಕಲಾ ಸ್ಪರ್ಧೆ:ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶವಿರುತ್ತದೆ. ನೊಂದಾವಣೆ  ಅದೇ ದಿನ ಮದ್ಯಾಹ್ನ 1:30ಕ್ಕೆ ಸಂಪರ್ಕ ಸಂಖ್ಯೆ: ಆನಂದ್‌ ಸೋನ್ಸ್‌ ಮೊ: 9901184656, ಸತೀಷ್‌ ಪೆಂಗಲ್‌ ಮೊ: 9036719916, ಕು| ಪ್ರಗತಿ ಬೇಕಲ್‌ :ಮೊ:9686261829, 9483435010,  ಪ್ರಥಮ ಬಹುಮಾನ  ರೂ. 5,000/-, ದ್ವಿತೀಯ ಬಹುಮಾನ ರೂ.3000/-, ತೃತೀಯ ಬಹುಮಾನ ರೂ.2,000/-ಹಾಗೂ 4 ಶ್ರೇಣಿಗಳಲ್ಲಿ ಸ್ಪರ್ಧೆ ನಡೆದು ಏಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ದೀಪಾವಳಿಯ ಸಂಭ್ರಮದ ಗೂಡುದೀಪ ಸ್ಪರ್ಧೆ:ಈ ಸ್ಪರ್ಧೆಯು ಸಂಜೆ ಗಂಟೆ 5:30ಕ್ಕೆ ಪ್ರಾರಂಭವಾಗುವುದು  ಹಾಗೂ ಬಂದಂತಹ ಎಲ್ಲಾ ಗೂಡುದೀಪ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

LEAVE A REPLY

Please enter your comment!
Please enter your name here