ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಮೂಡ್ನೂರು ಒಕ್ಕೂಟದ 20 ನೇ ವಾರ್ಷಿಕೋತ್ಸವ

0
132

ವಿಟ್ಲ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ವಿಟ್ಲ ವಲಯದ ವಿಟ್ಲ ಮೂಡ್ನೂರು ಒಕ್ಕೂಟದ 20 ನೇ ವಾರ್ಷಿಕೋತ್ಸವ. ಕಾರ್ಯಕ್ರಮ ರವಿವಾರ ಕುಂಡಡ್ಕ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.

ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡುತ್ತಾರು ಕಾರ್ಯಕ್ರಮ ಉದ್ಘಾಟಸಿ ಯೋಜನೆಯ ಕಾರ್ಯಕ್ರಮಗಳ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಬಾಲಕೃಷ್ಣ ಶೆಟ್ಟಿ ವಹಿಸಿದ್ದರು

ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಯೋಜನೆಯ ನಡೆದು ಬಂದ ದಾರಿ, ಯೋಜನೆ ಹಿನ್ನಲೆ, ಒಕ್ಕೂಟದ ಜವಾಬ್ದಾರಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಬಂದು ಸ್ವ ಸಹಾಯ ಸಂಘ ಗಳ ಕೇಂದ್ರ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ನವೀನ್ ಚಂದ್ರ, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇಣುಗೋಪಾಲ್, ವಿಟ್ಲ ವಲಯದ ಅಧ್ಯಕ್ಷರಾದ ಪ್ರಮೀಳಾ, ವಿಪತ್ತು ಘಟಕದ ಅಧ್ಯಕ್ಷರಾದ ಚಂದ್ರಹಾಸ, ಸಭಭವನದ ಸದಸ್ಯರಾದ ಸಂಜೀವ ಪೂಜಾರಿ, ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಉಪಸ್ಥಿತರಿದ್ದರು.

ಸುಂದರ ಪೂಜಾರಿ ಕೆಡಿಗೆದಡಿ ಸ್ವಾಗತಿಸಿ, ಧನ್ಯವಾದವನ್ನು ಸೌಮ್ಯ ವಂದಿಸಿದರು. ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು ಸೇವಾಪ್ರತಿನಿಧಿ ಯಶೋಧ ಮತ್ತು ವಿ ಎಲ್ ಇ ಶಿಲ್ಪಾ ಕೆ. ಸಹಕಿಸಿದರು.

LEAVE A REPLY

Please enter your comment!
Please enter your name here