ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್, ಎಂ.ಕೆ ಅನಂತರ ಶಾರೀರಿಕ ಶಿಕ್ಷಣ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 22ನೇ ಅಂತರ್ ಶಾಲಾ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯ ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ಸಪ್ಟಂಬರ್ ಒಂದರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಕೆಎಂಎಫ್ ನ ನಿರ್ದೇಶಕ ಸುಚರಿತ ಶೆಟ್ಟಿ, ಅಬುಲ್ ಅಲಾ ಪುತ್ತಿಗೆ, ರಾಹುಲ್ ಟಿ ಜಿ ಮಂಗಳೂರು, ಸುರೇಶ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ನಿಟ್ಟೆ, ರವಿ ಕೋಟ್ಯಾನ್ ವೇದಿಕೆಯಲ್ಲಿ ಹಾಜರಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಂಜಿತ್ ಸ್ವಾಗತಿಸಿದರು. ನವೀನ್ ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಓವರ್ ಆಲ್ ಚಾಂಪಿಯನ್ ಆಗಿ ನೀರುರ್ಮಾರ್ಗದ ರೆಡ್ ಕ್ಯಾಮಲ್ ಆಂಗ್ಲ ಮಾಧ್ಯಮ ಶಾಲೆ, ರನ್ನರ್ಸ್ ಚಾಂಪಿಯನ್ ಆಗಿ ಮಂಗಳೂರಿನ ಏನೆಪೋಯ ಶಾಲೆಯು ಹಾಗೂ
ತೃತೀಯ ಸ್ಥಾನ ಅಡ್ಯಾರಿನ ಬರಕ ಇಂಟರ್ನ್ಯಾಷನಲ್ ಸ್ಕೂಲ್ ಪಡೆಯಿತು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ