2ಕೆ26 ಅಂತರ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮಹೋತ್ಸವ ಯಶಸ್ವಿ

0
20

ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಗಮ 2ಕೆ26 ಅಂತರ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮಹೋತ್ಸವವು ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಸ್ಥೆಯ ಪ್ರಾರ್ಥನೆಯೊಂದಿಗೆ ಚಾಲನೆಯನ್ನು ನೀಡಲಾಯಿತು. ನಂತರ ವಿದ್ಯಾರ್ಥಿಗಳು ಟ್ರೋಫಿಯನ್ನು ರಿಲೀಸ್ ಮಾಡಿದರು. ಈ ಮಹೋತ್ಸವವು “ಪ್ರತಿಭೆಗಳ ಸಂಗಮ – ನಿಮ್ಮ ಪ್ರತಿಭೆಯನ್ನು ಆಚರಿಸಿ” ಎಂಬ ಘೋಷವಾಕ್ಯದೊಂದಿಗೆ “ವಿಕಸಿತ ಭಾರತ @ 2047” ಎಂಬ ಮಹತ್ತರ ಕನಸಿನ ದಿಸೆಯಲ್ಲಿ ಯುವಜನರ ಪ್ರತಿಭೆ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಹೊರಹಾಕುವ ಉದ್ದೇಶವನ್ನು ಹೊಂದಿದೆ.

ಈ ಮಹೋತ್ಸವದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಗುಣ, ತಾಂತ್ರಿಕ ಜ್ಞಾನ, ವ್ಯಾಪಾರ ಚಾತುರ್ಯ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಹೊರಹಾಕಲು ವೇದಿಕೆ ಒದಗಿಸುವುದಾಗಿದೆ.

ಈ ಮಹೋತ್ಸವದಲ್ಲಿ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ವಿಭಾಗಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಯು ಕೆ ಖಾಲಿದ್ ವಹಿಸಿದರು . ಅವರು ಅಧ್ಯಕ್ಷೀಯ ಭಾಷಣದಲ್ಲಿ ಎಸ್ ಸಿ ಎಸ್ ಸಂಸ್ಥೆ ಸದಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ತಾಂತ್ರಿಕ ಕೌಶಲ್ಯಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಆಶಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಿಥುನ್ ಭಟ್ ಕಾಕುಂಜೆ, ನಿರ್ದೇಶಕರು, ಕಾಕುಂಜೆ ಗ್ರೂಪ್ ಆಫ್ ಕಂಪನೀಸ್, ಮಂಗಳೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದರು .ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂತಹ ಅಂತರ ಕಾಲೇಜು ಮಟ್ಟದ ಮಹೋತ್ಸವಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಗಳಾಗಿವೆ ಎಂದು ಹೇಳಿದರು.

ಇಂದಿನ ಯುವಜನರು ಕೇವಲ ಪಾಠ ಪುಸ್ತಕ ಜ್ಞಾನಕ್ಕೆ ಸೀಮಿತವಾಗದೆ, ಸೃಜನಶೀಲತೆ, ನಾಯಕತ್ವ ಗುಣ ಮತ್ತು ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. “ವಿಕಸಿತ ಭಾರತ @ 2047” ಎಂಬ ಕನಸನ್ನು ನನಸು ಮಾಡಲು ಯುವಕರ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.ಪ್ರಾಂಶುಪಾಲರಾದ ಹಾರ್ದಿಕ್ ಪಿ ಚೌಹಾಣ್ ಎಲ್ಲರನ್ನು ಬಹಳ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ದೀಕ್ಷಿತ .ಆರ್ ಕಾರ್ಯಕ್ರಮದ ವರದಿಯನ್ನು ಓದಿದರು. ಎಸ್.ಸಿ. ಎಸ್ ರಿವರ್ಸ್ ಸೈಡ್ ಶಾಲೆಯ ಪ್ರಾಂಶುಪಾಲರಾದ ಹೆಲನ್ ಲೋಬೋ , ಕರ್ನಾಟಕ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರು ಡಾ. ಶ್ರೀಜಿತ್ , ವಿದ್ಯಾರ್ಥಿ ಕಾರ್ಯದರ್ಶಿ ಜಾಯ್ಲಿನ್ ಪಿಂಟೊ ಬಿ ಎಸ್ಸಿ ಅನಿಮೇಶನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀಪ್ ರೈ ವಂದಿಸಿದರು. ಶ್ರಾವ್ಯ ಬಿ ಎಸ್ಸಿ ಎಪ್.ಎನ್.ಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here