ಮೂಡುಬಿದಿರೆ: ನವಗಿರಿ ಸೇವಾ ಟ್ರಸ್ಟ್ ಹೊಸಬೆಟ್ಟು ಇದರ ಪ್ರಧಾನ ಯುವ ಸಂಘಟನೆ ಯುವ ಚೇತನ ಹೊಸಬೆಟ್ಟು ಕುಳಾಯಿ ಇದರ 32ನೇ ವಾರ್ಷಿಕೋತ್ಸವದ ಅಂಗವಾಗಿ ಭಲೆ ಜೋಡಿ ಸೀಸನ್ 4 ಕಾರ್ಯಕ್ರಮವು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ಅಪರಾಹ್ನ ವೇದಮೂರ್ತಿ ವಿನೋದ್ ಆಚಾರ್ ಹೊಸಬೆಟ್ಟು ಮತ್ತು ನವಗಿರಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಎಂ. ವೆಂಕಟ್ ರಾವ್ ಅವರಿಂದ ಉದ್ಘಾಟಿಸಲ್ಪಟ್ಟಿತು. ಶ್ರೀಮತಿ ಪ್ರಜ್ಞಾ ಸುಧೀಂದ್ರ ಅವರು ಭಲೆ ಜೋಡಿ ವಿಭಾಗಕ್ಕೆ ನಿರೂಪಣೆ ಮಾಡಿದರು, ಇದರಲ್ಲಿ ೧೭ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು.
ಇದರ ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವು ಶ್ರೀಶಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ವಿಕ್ರಮ್ ಮೈರ್ಪಾಡಿ ಸ್ವಾಗತ ಭಾಷಣ ಮಾಡಿದ್ದು, ಅಮಿತ್ ಹತ್ವಾರ್ ವರದಿ ವಾಚನವನ್ನು ಮಂಡಿಸಿದರು. ತದನಂತರ, ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರದ ವಿವರಗಳನ್ನು ವಸಂತ್ ರಾಜ್ ಹೆಚ್ ರವರು ಓದಿದರು. ಬ್ರಾಹ್ಮಣ ಕುಟುಂಬಗಳಿಗೆ ಸಹಾಯ ಧನದ ಮಾಹಿತಿಯನ್ನು ಪವನ್ ಮೈರ್ಪಾಡಿರವರು ಓದಿದ್ದು ಬ್ರಾಹ್ಮಣ ಸಮಾಜದ ಸಾಧಕರುಗಳನ್ನು ಸನ್ಮಾನಿಸಲಾಯಿತು.ಅಭಿಷೇಕ್ ಕಾರಂತ್ ಅವರು ಮಹಾ ನಟಿ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ಅವರ ಅಭಿನಂದನಾ ಪತ್ರವನ್ನು ಓದಿದರು. ಶ್ರೀಶಾ ಹೆಚ್ ಅವರು ವಿದುಷಿ ಧನ್ಯಶ್ರೀ ಡಿ. ಭಟ್ ರವರ ಮತ್ತು ಕಾರ್ತಿಕ್ ಅವರು ಸಿಎ ನಂದನ್ ರಾವ್ ರವರ ಸನ್ಮಾನ ಪತ್ರವನ್ನು ಓದಿದರು.ದರ್ಶನ್ ಆಚಾರ್ ಅವರು ಬಹುಮಾನಿತರ ಪಟ್ಟಿಯನ್ನು ಓದಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ ದಿವಾಕರ್ ಸುರತ್ಕಲ್ ರವರು ಬ್ರಾಹ್ಮಣರು ಬ್ರಾಹ್ಮಣ್ಯ ಮತ್ತು ಸಂಸ್ಕಾರ ಪಾಲನೆ ಅಗತ್ಯ ಎಂದು ತಿಳಿಸಿದ್ದರು. ಶ್ರೀ ನಾಗೇಶ್ ಮೈರ್ಪಾಡಿರವರು ಯುವ ಚೇತನದ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಶ್ರೀ ವೆಂಕಟೇಶ್ ಕೆ ಮತ್ತು ಶ್ರೀಮತಿ ಕಮಲ ಕೆ ಬಹುಮಾನ ವಿತರಣೆ ಮಾಡಿದ್ದರು. ಸಭಾಧ್ಯಕ್ಷರಾದ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಬ್ರಾಹ್ಮಣ ಸಮಾಜದ ಪ್ರತಿಭೆಗಳ ಅನಾವರಣ ಮತ್ತು ಉತ್ತೇಜನಕ್ಕೆ ಯುವ ಚೇತನ ನಿರಂತರ ಪ್ರೋತ್ಸಾಹ ನೀಡುತ್ತಿದ್ದು ಮಾದರಿ ಸಂಘವಾಗಿ ಬೆಳೆದಿರುವ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಶ್ರೀ ರಾಘವೇಂದ್ರ ಯಚ್ ವಿ, ಶ್ರೀ ಕೇಶವ ವಿ ಯನ್, ಶ್ರೀ ಸುಬ್ರಹ್ಮಣ್ಯ ಆಚಾರ್, ಶ್ರೀನಿವಾಸ ಕುಳಾಯಿ, ಅಡ್ವೋಕೇಟ್ ಶ್ರೀ ರವಿಪ್ರಸನ್ನ ಸಿ ಕೆ, ಶ್ರೀ ಪ್ರಶಾಂತ್ ರಾವ್, ಶ್ರೀ ಅರುಣ್ ಕೆ, ಶ್ರೀ ಅಶೋಕ್ ಕುಳಾಯಿ, ಶ್ರೀ ದೀಪಕ್ ರಾವ್, ಶ್ರೀ ಅಭಿಷೇಕ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ವಾಸ್ತು ಶಿಲ್ಪಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿ ರವರನ್ನು ಅಭಿನಂದಿಸಲಾಯಿತು. ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ . “ವಾಯ್ಸ್ ಆಫ್ ಆರಾಧನಾ” ತಂಡವು ಆಕರ್ಷಕ “ಗಾನ ವೈಭವ” ಪ್ರದರ್ಶನವನ್ನು ನೀಡಿತು. ಶ್ರೀ ಪವನ್ ಮೈರ್ಪಾಡಿ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದ ನೀಡಿದ್ದರು.