ಮಂಗಳೂರು :- ತಾಂತ್ರಿಕ ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ವಿದ್ಯಾ ಸಂಸ್ಥೆಯಲ್ಲಿ ತಾಂತ್ರಿಕ ಶಿಕ್ಷಣ ಪಡೆದ, ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯವಿರುವ ಅಭಿಷೇಕ್ ಆರ್ ಪಂಡಿತ್ ಇವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಜ್ಞಾನ ಸಂಗಮ,ಬೆಳಗಾವಿ ಇಲ್ಲಿ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೊಟ್ ಇವರಿಂದ ಚಿನ್ನದ ಪದಕ ಸ್ವೀಕರಿಸಿದರು.
ದಿನಾಂಕ 4 ಜುಲೈ 2025 ರಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇಲ್ಲಿನ ಸಭಾಂಗಣದಲ್ಲಿ ನಡೆದ 25ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ತಾಂತ್ರಿಕ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ದಕ್ಷಿಣ ಕನ್ನಡದ ಅಭಿಷೇಕ್ ಆರ್ ಪಂಡಿತ್ ಸಹಿತ ಕರ್ನಾಟಕದ ಒಟ್ಟು 35 ಮಂದಿ ವಿದ್ಯಾರ್ಥಿಗಳು ತಮ್ಮ ಸಾಧನೆಗಾಗಿ ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸಿದರು, ಕರ್ನಾಟಕದ ಹೆಮ್ಮೆಗೆ ಪಾತ್ರರಾದರು
ಕರ್ನಾಟಕದ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪೂರೈಸಿದ ಒಟ್ಟು 271 ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕ್ಷಮತೆಗಾಗಿ ರ‍್ಯಾಂಕ್ ನೀಡಲಾಗಿದ್ದು ಘಟಿಕೋತ್ಸವ ಸಂದರ್ಭದಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ಅರ್ಹತಾ ಪತ್ರ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಅಭಿಷೇಕ್ ಆರ್ ಪಂಡಿತ್ ಇವರು ರಾಮಚಂದ್ರ ಪಂಡಿತ್ ಮತ್ತು ಅನ್ನಪೂರ್ಣ ಇವರ ಸುಪುತ್ರರಾಗಿದ್ದು, ರಾಮಚಂದ್ರ ಪಂಡಿತ್ ಇವರು ಕರಾಡ ಬ್ರಾಹ್ಮಣ ಸುಧಾರಕ ಸಂಘ, ಶ್ರೀನಿವಾಸಪುರ ಗುಂಡ್ಯಡ್ಕ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ, ಅನ್ನಪೂರ್ಣ ಇವರು ಗೃಹಿಣಿಯಾಗಿದ್ದು, ಮಗ ಅಭಿಷೇಕ್ ಆರ್ ಪಂಡಿತ್ ಇವರ ಸಾಧನೆ ಬಗ್ಗೆ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ
ಸಮಾರಂಭದ ವೇದಿಕೆಯಲ್ಲಿ ರಾಜ್ಯಪಾಲರ ಜೊತೆ ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್, ಪ್ರೊಫೆಸರ್ ವಿದ್ಯಾ ಶಂಕರ್ ಎಸ್, ಪ್ರೊಫೆಸರ್ ಬಿ ಇ ರಂಗಸ್ವಾಮಿ, ಪ್ರೊಫೆಸರ್ ಟಿ ಎನ್ ಶ್ರೀನಿವಾಸ ಉಪಸ್ಥಿತರಿದ್ದರು.

ವರದಿ :-ಮಂದಾರ ರಾಜೇಶ್ ಭಟ್