ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 36ನೇ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು ಪುನರಾಯ್ಕೆ

0
24

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.). ಕಾಸರಗೋಡು ಇದರ 2025-26 ನೇ ಸಾಲಿನ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಪುನರಾಯ್ಕೆಗೊಂಡಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ, ಕಾಸರಗೋಡು ಇದರ 35 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಸರಗೋಡು ಕನ್ನಡ ಗ್ರಾಮ ದಲ್ಲಿ 2025 ನವೆಂಬರ್ 4ರಂದು ನಡೆಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. 2024 – 25 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ಮಂಡಿಸಿ ಅನುಮೋದನೆ ಪಡೆದರು. 2025 – 26 ನೇ ಸಾಲಿನ ಯೋಜನೆಗೆ ರೂಪಾಯಿ 25 ಲಕ್ಷ ಮೊತ್ತವನ್ನು ಮುಂಗಡವಾಗಿ ಕಾಯ್ದಿರಿಸಲಾಯಿತು. 2025-26ನೇ ವರ್ಷದಲ್ಲಿ ಈ ಕೆಳಗಿನ ಕಾರ್ಯ ಯೋಜನೆಗಳಿಗೆ ಅಂಗೀಕಾರ ನೀಡಲಾಯಿತು.

ಕಾಸರಗೋಡು ಗೋ- ಕುಟೀರ ನಿರ್ಮಾಣ ಹಂತದಲ್ಲಿದ್ದು ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಆರ್ಥಿಕ ನೆರವಿನಿಂದ ಶೀಘ್ರದಲ್ಲೇ ಉದ್ಘಾಟಿಸಲು ತೀರ್ಮಾನಿಸಲಾಯಿತು. * ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ – ಕರ್ನಾಟಕ ಉತ್ಸವವನ್ನು ಏರ್ಪಡಿಸುವುದು. *ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು . ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಕೇರಳ ರಾಜ್ಯ ತೃತೀಯ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶಕ್ಕೆ, ಸಹಯೋಗ ನೀಡುವುದು.

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಕಾಸರಗೋಡು ಜಿಲ್ಲಾ 8 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಕಾಸರಗೋಡು ಜಿಲ್ಲಾ 4ನೇ ಕನ್ನಡ ಜಾಗೃತಿ ಸಮ್ಮೇಳನಕ್ಕೆ ಸಹಯೋಗ ನೀಡುವುದು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ಪುನರ್ ಸಂಘಟಿಸಿ ನೂತನ ಪದಾಧಿಕಾರಿಗಳನ್ನು ನೇಮಿಸುವುದು.

ಕಾಸರಗೋಡು ಜಿಲ್ಲಾ ( ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘದ 40 ನೇ ಸಂಸ್ಥಾಪನಾ ವರ್ಷಾಚರಣೆ ನಡೆಸುವುದು. ಸಂಘವನ್ನು ಪುನರ್ ಸಂಘಟಿಸಿ ನೂತನ ಪದಾಧಿಕಾರಿಗಳನ್ನು ನೇಮಿಸುವುದು. ಕಾಸರಗೋಡು ಜಿಲ್ಲಾ ( ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದಿಂದ ಅಂಗೀಕಾರ ಪಡೆಯುವುದಕ್ಕೆ ಬೆಂಗಳೂರಿಗೆ ನಿಯೋಗವನ್ನು ಕೊಂಡೊಯ್ಯಲು ತೀರ್ಮಾನಿಸಲಾಯಿತು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾಸರಗೋಡು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದು.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಜಂಟಿ ಸಹಯೋಗದಲ್ಲಿ ಐದು ದಿನಗಳ ಕಾಲ ಕಾಸರಗೋಡು ಕನ್ನಡ ಗ್ರಾಮದಲ್ಲಿ ಅಂತರ ರಾಜ್ಯ ಮಟ್ಟದ ಬಹುಭಾಷಾ ಸಾಹಿತ್ಯೋತ್ಸವ, ಯಕ್ಷಗಾನೋತ್ಸವ, ನಾಟಕೋತ್ಸವ, ಸಂಗೀತೋತ್ಸವ, ನೃತೋತ್ಸವಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 2026-27 ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶಿವರಾಮ ಕಾಸರಗೋಡು ಅಧ್ಯಕ್ಷರು, ರಾಧಾಕೃಷ್ಣ ಕೆ ಉಳಿಯತ್ತಡ್ಕ ಉಪಾಧ್ಯಕ್ಷರು, ಕೆ. ಜಗದೀಶ್ ಕೂಡು ಪ್ರಧಾನ ಕಾರ್ಯದರ್ಶಿ, ಕಾವ್ಯ ಕುಶಲ ಜೊತೆ ಕಾರ್ಯದರ್ಶಿ, ರಾಧಾ ಕೆ. ಕಾಸರಗೋಡು ಕೋಶಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್. ಎಲ್. ಭಾರದ್ವಾಜ್ ಬೇಕಲ್, ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ಕೆ ಗುರುಪ್ರಸಾದ ಕೋಟಿಕಣಿ, ಕುಶಲಕುಮಾರ್ .ಕೆ. ಶ್ರೀಕಾಂತ್ ಕಾಸರಗೋಡು, ಕಿಶೋರ್ ಕುಮಾರ್. ಕೆ. ದಿವಾಕರ ಪಿ .ಅಶೋಕನಗರ, ಕೆ.ಬಿ ದಯಾನಂದ ಬೆಳ್ಳೂರಡ್ಕ ಮನ್ನಿಪ್ಪಾಡಿ, ಬಿ. ಸತೀಶ ಕೂಡು ಎನ್.ಯೋಗೀಶ್ ಕೋಟೆಕಣಿ, ಶಶಿಕುಮಾರ್ ಕೂಡು ಮುಂತಾದವರನ್ನು ಆಯ್ಕೆ ಮಾಡಲಾಯಿತು.

ವಿಶೇಷ ಆಹ್ವಾನಿತರಾಗಿ ಶಾರದ ಬಿ. ಕೌನ್ಸಿಲರ್ ಕಾಸರಗೋಡು ನಗರ ಸಭೆ, ಜಯಾನಂದ ಕುಮಾರ್ ಹೊಸದುರ್ಗ, ರಾಮಕೃಷ್ಣ ಮಯ್ಯ ಸಿರಿ ಬಾಗಿಲು, ಕಾಸರಗೋಡು ನಗರಸಭೆ ಮಾಜಿ ಕೌನ್ಸಿಲರ್ ಶಂಕರ್ ಕೆ. ಕೆ.ವರಪ್ರಸಾದ್ ಕೋಟೆಕಣಿ, ರಾಮಪ್ರಸಾದ್ ಕಾಸರಗೋಡು, ಕ .ವಿ ರಮೇಶ್ ಕಾಸರಗೋಡು, ಲವ ಕೆ. ಮೀಪುಗುರಿ, ಗಣೇಶ್ ನಾಯ್. ಕೆ. ಪುರುಷೋತ್ತಮ ಎಂ. ನಾಯ್ಕ, ಹರಿಕಾಂತ ಕೆ ಕಾಸರಗೋಡು ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಎನ್ ಸಂದೇಶ್ ಕೋಟಕಣಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here