ರೋಟರಿ ವಿದ್ಯಾ ಸಂಸ್ಥೆಗಳಲ್ಲಿ 45ನೇ ವಾರ್ಷಿಕೋತ್ಸವದ ಸಂಭ್ರಮ

0
55

12/12/2025 ರಂದು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅಮರಾವತಿ ಸಭಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ 2025-26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ
ಬ್ಯಾಂಡ್ ಸೆಟ್ ಮತ್ತು ಪೂರ್ಣ ಕುಂಭಗಳೊಂದಿಗೆ ಶಾಲಾ ಧ್ವಜವನ್ನು ಅರಳಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅದರೊಂದಿಗೆ ಕಲಾಕೃತಿಗಳ ದ್ವಾರ ಮಂಟಪ ಅನಾವರಣಗೊಳಿಸಲಾಯಿತು.

ವಿದ್ಯಾರ್ಥಿಗಳ ಸುಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ರೋ: ಅನಂತ ಕೃಷ್ಣ ರಾವ್ ಇವರು ಅತಿಥಿಗಳನ್ನು ಸ್ವಾಗತಿಸಿ. ಶಾಲೆಯ ಸ್ಥಾಪಕ ಅಧ್ಯಕ್ಷರಾದ ಅಮರಾನಾಥ್ ಶೆಟ್ಟಿಯವರ ಸುಂದರ ಕಲ್ಪನೆಯೊಂದಿಗೆ ಮೂಡಿಬಂದ ಸಂಸ್ಥೆಯೆ ರೋಟರಿ ವಿದ್ಯಾಸಂಸ್ಥೆ. ಶಿಕ್ಷಣ ಎಂಬುದರಿಂದ ಆತ್ಮಜ್ಯೋತಿ ಬೆಳಗಿಸಬೇಕು. ಮಕ್ಕಳಲ್ಲಿರುವ ಜ್ಞಾನ ಶಕ್ತಿಯನ್ನು ಪ್ರಜ್ವಲಿಸಬೇಕು ಎಂದರು.

ನಂತರ ದೀಪಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಹಾಗೂ ವಿವಿಧ ವಿಭಾಗದಲ್ಲಿ ಬಹುಮಾನ ವಿತರಿಸಲಾಯಿತು. ರೋಟರಿ ಶಾಲಾ ಪ್ರೌಢ ವಿಭಾಗದ ಶಿಕ್ಷಕಿಯಾದ ವಿನಯಾ ಇವರು ಮುಖ್ಯ ಅತಿಥಿಗಳಾದ ಕುಮಾರ ಚಂದ್ರ ಅವರನ್ನು ಪರಿಚಯಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು. ಇವರು ಸಾಮಾಜಿಕವಾಗಿ, ಭೌತಿಕವಾಗಿ, ಶಾರೀರಿಕವಾಗಿ ನಮ್ಮನ್ನು ತೊಡಗಿಸಿಕೊಳ್ಳುವುದು ನಿಜವಾದ ಶಿಕ್ಷಣ. ಮಕ್ಕಳ ಮೇಲೆ ಸೂಕ್ಷ್ಮಗಮನ ಹರಿಸುವುದು ಅತಿ ಅಗತ್ಯ ಎಂದು ನುಡಿದರು.

ಮತ್ತೊರ್ವ ಅತಿಥಿಯಾದ ಮೂಡಬಿದಿರೆ ರೋಟರಿ ಕ್ಲಬ್ ನ ಕಾರ್ಯದರ್ಶಿಗಳಾದ ಪವನ್ ಪೈ ಇವರು ಸಿಕ್ಕ ಅವಕಾಶಗಳನ್ನು ಉಪಯೋಗಿಸಿ ದಿಟ್ಟತನದಿಂದ ನ್ಯಾಯಯುತವಾಗಿ ಬದುಕಬೇಕೆಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ. ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನಾರಾಯಣ್ ಪಿ. ಎಂ ಅವರು ವಿದ್ಯಾಭ್ಯಾಸ ಅಲ್ಲದೆ ಎಲ್ಲಾ ರೀತಿಯ ಶಿಕ್ಷಣಗಳು ಹಾಗೂ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವಲ್ಲಿ ರೋಟರಿ ವಿದ್ಯಾಸಂಸ್ಥೆಯು ಮಾರ್ಗದರ್ಶನ ನೀಡುತ್ತಿದೆ ಎಂದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್, ಆರ್ ಪಿ. ಯು. ಸಿ & ಸಿಬಿಎಸ್ ಸಿ ಸಂಚಾಲಕರಾದ ಜೆ. ಡಬ್ಲೂ ಪಿಂಟೋ, ರೋಟರಿ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿಯರಾದ ತಿಲಕಾ ಅನಂತ ವೀರ್ ಜೈನ್, ಆರ್ ಪಿ ಯು ಸಿ ಪ್ರಾಂಶುಪಾಲರಾದ ರವಿ ಕುಮಾರ್, ರೋಟರಿ ಸೆಂಟ್ರಲ್ ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಲಕ್ಷ್ಮಿ ಮರಾಠೆ, ಹಿರಿಯ ಸಂಯೋಜಕರಾದ ಗಜಾನನ ಮರಾಠೆ, ವಿವಿಧ ವಿಭಾಗದ ಸಂಯೋಜಕರಾದ ಪ್ರಫುಲ್ಲಾ, ಡೀಲನ್ ಮಸ್ಕರೇನಸ್, ಗಾಯಿತ್ರಿ, ವಿದ್ಯಾರ್ಥಿನಾಯಕರಾದ ಕುಮಾರಿ ಪ್ರಶ್ನಾ, ಕುಮಾರಿ ಧನ್ವಿ ಶೆಟ್ಟಿ, ವಿಖ್ಯಾತ್ ಪಿ ಶೆಟ್ಟಿ, ಉಪಸ್ಥಿತರಿದ್ದರು.

ಅಬ್ದುಲ್ ರೌಫ್, ನಾಗರಾಜ್ ಪಿ.ಎಂ, ಎ ಎಂ ಕುಮಾರ್, ಪ್ರಭಾಕರ, ಪಿ. ಕೆ ಥೋಮಸ್, ಸಹನಾ ನಾಗರಾಜ್,
ಇನ್ನರ್ ವೀಲ್ ಅಧ್ಯಕ್ಷರಾದ ಶ್ವೇತಾ ಜೈನ್, ಇನ್ನರ್ ವೀಲ್ ಸದಸ್ಯರಾದ ಶೋಭಾ ಸಿಕ್ವೆರಾ, ವೀಣಾ ರತ್ನರಾಜ್. ವಿವಿಧ ವಿಭಾಗದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಆಗಮಿಸಿದ ಎಲ್ಲಾ ಅತಿಥಿಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರ್ ಪಿ ಯು ಸಿ & ಸಿಬಿಎಸ್ಸಿ ಸಂಚಾಲಕರಾದ ಜೆ ಡಬ್ಲೂ ಪಿಂಟೋ ಇವರು ವಂದನಾರ್ಪಣೆ ಮಾಡಿದರು.
ಶಿಕ್ಷಕಿಯರಾದ ಗಾಯತ್ರಿ ಮತ್ತು ಪ್ರಣಾಮಿ ಕಾರ್ಯಕ್ರಮದ ನಿರೂಪಣೆ ಗೈದರು.

LEAVE A REPLY

Please enter your comment!
Please enter your name here