ವರದಿ ರಾಯಿ ರಾಜ ಕುಮಾರ
ಕಾಂತಾವರ ಕನ್ನಡ ಸಂಘವು 50 ವರ್ಷಗಳಲ್ಲಿ ಮರೆಯಲಾಗದ ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಎಂದು ಕಾರ್ಯಕ್ರಮ ಉದ್ಘಾಟಿಸಿ ಕಾರ್ಕಳದ ಹಿರಿಯ ಚಾರ್ಟ್ಡ್ ಎಕೌಂಟೆಂಟ್ ಕಮಲಾಕ್ಷ ಕಾಮತ್ ಹೇಳಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಕಿಸಿದ್ದರು.
ಸಾಹಿತ್ಯ ಕೃತಿಗಳನ್ನು ಕೊಂಡು ಓದುವ, ಕೊಂಡಾಡುವ ಕೆಲಸವಾಗಬೇಕಾಗಿದೆ
ಮಾಧ್ಯಮ ಯಾವುದೇ ಇದ್ದರೂ ಕನ್ನಡವನ್ನು ಒಂದು ವಿಷಯವಾಗಿ ಎಲ್ಲರೂ ಕಲಿಯುವಂತಾಗ ಬೇಕು ಎಂದು ಆಗ್ರಹಿಸಿದರು.
ಉಡುಪಿಯ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಅಧ್ಯಕ್ಷ
ಯು.ವಿಶ್ವನಾಥ ಶೆಣೈ ಅವರು ‘ನಾಡಿಗೆ ನಮಸ್ಕಾರ ಗ್ರಂಥಮಾಲಿಕೆಯ ನೂತನ ಹತ್ತು ಕೃತಿಗಳನ್ನು ಬಿಡುಗಡೆಗೊಳಿಸಿದರು .
ಸ್ವಾಗತ ಸಮಿತಿ ಗೌರವ ಕಾರ್ಯಾಧ್ಯಕ್ಷ ಮೂಡುಬಿದಿರೆಯ ಕೆ. ಶ್ರೀಪತಿ ಭಟ್ ಅವರು ಕನ್ನಡ ಸಂಘದ ಸಂಸ್ಕತ ಸಂವರ್ಧನ ಗ್ರಂಥಮಾಲೆಯಡಿ ಪ್ರಕಟಿತ, ‘ ಆನೆ ಕಾಲಿಗೆ ಅಂಕುಶ’ -ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ.ನರಹರಿ ಮತ್ತು ಐಎಡಿ ಕೃತಿಯನ್ನು ಬಿಡುಗಡೆಗೊಳಿಸಿದರು.
ಸತೀಶ್ ಕುಮಾರ್ ಕೆಮ್ಮಣ್ಣು ಅವರು ಕನ್ನಡ ಧ್ವಜಾರೋಹಣಗೈದರು. ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ನಿರೂಪಿಸಿದರು. ಸುಮನಾ ವಂದಿಸಿದರು

