ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ಮೂಡುಬಿದರೆ ತಾಲೂಕು ಇದರ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ತಾಲೂಕು ಆಡಳಿತ ಸೌಧದ ಎದುರು ನವೆಂಬರ್ 1 ರಂದು ನಡೆಯಿತು. ತಾಲೂಕು ತಹಸಿಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಧ್ವಜಾರೋಹಣವನ್ನು ನೆರವೇರಿಸಿ ಪ್ರತಿಯೊಬ್ಬರು ಒಂದೊಂದು ವಿಭಾಗದಲ್ಲಿ ಉತ್ತಮ ಸಾಧನೆಯನ್ನು ಮಾಡಿರಲಿ ಪ್ರಾದೇಶಿಕ ಅಸಮಾನತೆಗಳು ದೂರವಾಗಿ ರಾಜ್ಯದ ಅಭಿವೃದ್ಧಿ ಸಾಧ್ಯ ಇದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಶ್ರೀನಿವಾಸ ಮಲ್ಯರು ಮಾಡಿದ ಜಿಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಕನ್ನಡವನ್ನು ಅಭಿವೃದ್ಧಿಪಡಿಸಲು ಪ್ರತಿಯೊಬ್ಬರು ಆಂಗ್ಲ ಮಾಧ್ಯಮದ ತೆಕ್ಕೆಯಿಂದ ಹೊರಬಂದು ಕನ್ನಡವನ್ನು ಬೆಳೆಸಬೇಕಾಗಿದೆ. ಮಕ್ಕಳಲ್ಲಿಯೂ ಕನ್ನಡದ ಪ್ರೀತಿಯನ್ನು ಬೆಳೆಸುವುದರಿಂದ ಸ್ಥಳೀಯ ಅಭಿವೃದ್ಧಿ ಬಹಳ ಸುಲಭ ಸಾಧ್ಯ ಎಂದು ತಿಳಿ ಹೇಳಿದರು.

ವೇದಿಕೆಯಲ್ಲಿ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ದಕ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ರಾಜೇಶ್ ಕಡಲಕೆರೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ, ಪುರಸಭಾ ಮುಖ್ಯ ಅಧಿಕಾರಿ ಶ್ರೀಮತಿ ಇಂದು, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಉಪಸ್ಥಿತರಿದ್ದರು. ಉಪತಾಸಿಲ್ದಾರ್ ರಾಮ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
.

