ಜೇಸಿಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ

0
7

ದೇಶದ 77ನೇ ಗಣರಾಜ್ಯೋತ್ಸವ ದಿನವನ್ನು ದ್ವಜಾರೋಹಣದ ಮೂಲಕ ಜೇಸಿಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಆಡಳಿತ ಮಂಡಳಿಯ ಸದಸ್ಯರಾಗಿರುವ ಜೇಸಿ ಜಯಕುಮಾರ್ ಅವರು ನೆರವೇರಿಸಿದರು. ಶಾಲಾಮುಖ್ಯೋಪಾಧ್ಯಾಯಿನಿ ಸುರೇಖಾರಾಜ್ ರವರು ಸ್ವಾಗತಿಸಿದರು. 

ಮಹಾತ್ಮಗಾಂಧೀಜಿಯವರ ಮತ್ತು ಸವಿಂದಾನ ಶಿಲ್ಪಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿಚಿತ್ತರಂಜನ್ ಶೆಟ್ಟಿಯವರು,  ಶಾಲಾ ಸಂಚಾಲಕರಾದ ಡಾ. ಮುರಳಿಧರ್‌ ಭಟ್ಟ್ ರವರು, ಜೆಸಿಐ ಕಾರ್ಕಳದ ನಿಕಟ ಪೂರ್ವ ಅಧ್ಯಕ್ಷ್ಯೆ ಜೇಸಿಶ್ವೇತಾ ಜೈನ್,  ಜೆಸಿಐ ಕಾರ್ಯದರ್ಶಿ ಜೇಸಿ ಸುಶಾಂತ್‌ ಶೆಟ್ಟಿ,  ಶಾಲಾಮುಖ್ಯೋಪಾಧ್ಯಯಿನಿ ಸುರೇಖಾರಾಜ್ರವರು,  ದೈಹಿಕ ಶಿಕ್ಷಕರಾದ ಪ್ರತಾಪ್, ಗಣಿತ ಶಿಕ್ಷಕರಾದ ಶಂಕರ್ ರವರು ಹಾಗೂ ಕುಮಾರಿ ಅನನ್ಯರವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here