ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ.

0
98

ಬಾಯಾರು :ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿಜೃಂಭಣೆಯಿಂದ ಜರಗಿತು.
ಶ್ರೀ ಸತ್ಯನಾರಾಯಣ ಭಟ್, ಸೇರಾಜೆ, ಚೀಫ್ ಮ್ಯಾನೇಜರ್, ರಿಫೈನರಿ ಆಫೀಸರ್, ಎಂ.ಆರ್.ಪಿ.ಎಲ್., ಮಂಗಳೂರು, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ, ಮಾತನಾಡುತ್ತಾ ,”ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ಸ್ಮರಿಸಿ, ಚಾರಿತ್ರ್ಯದಿಂದಲೇ ಭಾರತ ವಿಶ್ವಗುರು “ಎಂಬುದಾಗಿ ಮಕ್ಕಳಿಗೆ ಹಿತವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಉಪಾಧ್ಯಕ್ಷರು, ಪ್ರಶಾಂತಿ ಸೇವಾ ಟ್ರಸ್ಟ್ ಇವರು ವಹಿಸಿದ್ದರು.
ಶ್ರೀ ಮಾಣಿಪ್ಪಾಡಿ ನಾರಾಯಣ ಭಟ್, ಕಾರ್ಯದರ್ಶಿ ಪ್ರಶಾಂತಿ ಸೇವಾ ಟ್ರಸ್ಟ್ ,ಶಾಲಾ ಸಂಚಾಲಕರಾದ ಶ್ರೀ ಹಿರಣ್ಯ ಮಹಾಲಿಂಗ ಭಟ್; ಟ್ರಸ್ಟ್ ಸದಸ್ಯರಾದ ಶ್ರೀ ಪಯ್ಯರಕೋಡಿ ಸದಾಶಿವ ಭಟ್; ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀಹರಿ ಭಟ್ ಉಪಸ್ಥಿತರಿದ್ದರು.ಸಿಬಿಎಸ್ ಕ್ಲಸ್ಟರ್ ಮತ್ತು ಸಹೋದಯ ಇಂಟರ್ ಸ್ಕೂಲ್ ಸ್ಪರ್ಧೆಯಲ್ಲಿ ಕಬಡ್ಡಿ ಮತ್ತು ಟೇಬಲ್ ಟೆನಿಸ್ ಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಸ್ವಾತಂತ್ರೋತ್ಸವ ದ ಕುರಿತ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಕಿರು ಭಾಷಣವನ್ನು ಮಾಡಿದರು.

ಪ್ರಾಂಶುಪಾಲರಾದ ಶ್ರೀ ವಾಮನನ್ ಸ್ವಾಗತಿಸಿ, ಸಂಸ್ಕ್ರತ ಶಿಕ್ಷಕರಾದ ಶ್ರೀ ಗಣಪತಿ ಪಿ.ಕೆ. ಧನ್ಯವಾದವಿತ್ತರು. ಕನ್ನಡ ಶಿಕ್ಷಕ ಶ್ರೀ ನಿತ್ಯಾನಂದ ಕೆ ಆರ್ ಬೇಕೂರು ಕಾರ್ಯಕ್ರಮವನ್ನು ನಿರೂಪಿಸಿ ,ನಿರ್ವಹಿಸಿದರು.
ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ನೃತ್ಯ ರೂಪಕ ಹಾಗೂ ಮುದ್ದು ಮಕ್ಕಳ ಬಾಲಕೃಷ್ಣವೇಷ ಪ್ರದರ್ಶನ ನಡೆಯಿತು.ಮಡಕೆ ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳ ಜತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here