ಕಲ್ಲಡ್ಕ : ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ವತಿಯಿಂದ 79ನೇ ಸ್ವಾತಂತ್ರೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆಹಾಡುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿಯವರು ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿ ಸಂಘದ ಸದಸ್ಯರಿಗೆ ಅಭಿನಂದಿಸಿದರು. ಗೌರವಾಧ್ಯಕ್ಷರಾದ ವೆಂಕಟ್ರಯ ಪ್ರಭು, ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್, ಚೆನ್ನಪ್ಪ ಕೋಟ್ಯಾನ್ ತೋಟ, ಕೆ ಏನ್ ಬಿ ಮಾಲಕರಾದ ನವಾಜ್, ಚಂದ್ರಶೇಖರ ಸಾಲ್ಯಾನ್ ಉಪಸ್ಥಿತರಿದ್ದರು. ಯೋಗೀಶ್ ತೋಟ ಕಾರ್ಯಕ್ರಮ ನಿರ್ವಹಿಸಿದರು.

