ಇಲ್ಲಿನ 80 ಬಡಗಬೆಟ್ಟು ಶ್ರೀ ಬ್ರಹ್ಮ ಬೈದೇರುಗಳ ಗರೋ ಡಿಯ ಪುನಃ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕವು ಎ.19ರಿಂದ 30ರ ವರೆಗೆ ನಡೆಯಲಿದೆ. 3 ಕೋಟಿ ರೂ. ವೆಚ್ಚದಲ್ಲಿ ಗರೋಡಿಯ ನೂತನ ಕಟ್ಟಡ, ಹೆಬ್ಬಾಗಿಲು ನಿರ್ಮಾಣ ಕಾಮಾಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಉತ್ತಮ ಜಾತಿಯ ಮರಗಳನ್ನು ಬಳಸಿ ಛಾವಣಿ ನಿರ್ಮಿಸಿ ಹೆಂಚು ಹೊದೆಸಲಾಗಿದೆ.
ಇತರ ಗರೋಡಿಗಳಿಗಿಂತ ಇದರ ಮಾಡು ಸ್ವಲ್ಪ ಎತ್ತರವಿದೆ. ಬ್ರಹ್ಮರ ಗುಂಡ ಸಾಗು ವಾನಿ ಮರದಿಂದ ನಿರ್ಮಾಣವಾಗುತ್ತಿದೆ. ತುಳುನಾಡಿನಾದ್ಯಂತ 260ಕ್ಕಿಂತಲೂ ಹೆಚ್ಚಿನ ಗರೋಡಿಗಳಿದ್ದು ಅವುಗಳಲ್ಲಿ 80 ಬಡಗಬೆಟ್ಟು ಗ್ರಾಮದ ಗರೋಡಿ ಪುರಾತನವೆಂಬ ಪ್ರತೀತ ಹೊಂದಿದೆ. ಕೋಟಿ-ಚೆನ್ನಯರಿಂದಲೇ ಸ್ಥಾಪನೆಯಾಗಿದೆಂಬ ಹಿರಿಮೆ ಇದ್ದರು, ಇಲ್ಲಿ ಹೂವಿನ ಪೂಜೆ ವರ್ಷವಿಡೀ ಬಹುಸಂಖ್ಯೆಯಲ್ಲಿ ನಡೆಯುತ್ತದೆ.
ಮಕರ ತಿಂಗಳ ಶುಕ್ಲಪಕ್ಷದ ದ್ವಾದಶಿಯಂದು ಅನ್ನ ನೈವೇದ್ಯದ ಅಗಲು ಸೇವೆಯನ್ನು ಮಾಡಿ ಮರುದಿನ ಬೈದೇರುಗಳ ನೇಮ ಜರಗಿ ಮೂರನೇ ದಿನ ಮಾಯಂದಲೆ ನೇಮ ನಡೆಯುತ್ತದೆ. ಇಲ್ಲಿ ಏಳು ಪರಿವಾರ ದೈವ ಗಳ ಸಾನಿಧ್ಯವಿದೆ. ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ ನಡೆಯುತ್ತದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬಿ. ಜಯರಾಜ ಹೆಗ್ಡೆ ಆಡಳಿತ ಮೊಕ್ತಸರ ಅರುಣಾಚಲ ಹೆಗ್ಡೆ ತಿಳಿಸಿದ್ದಾರೆ.
ವರದಿ ವಿನೋದ್ ಶೆಟ್ಟಿ ಉಡುಪಿ

