ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಇದರ ಆಶ್ರಯದಲ್ಲಿ 8 ನೇ ವರ್ಷದ ಪಾದಯಾತ್ರೆ 08-02-2026 ಆದಿತ್ಯವಾರ ಬೆಳಿಗ್ಗೆ 5-30 ಗಂಟೆಗೆ ಸರಿಯಾಗಿ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನ ಸುರತ್ಕಲ್ ಪ್ರಸಾದ್ ಅಸ್ಸಣ್ಣ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಇವರು ದೀಪ ಪ್ರಜ್ವಲನೆ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು .

ಶ್ರೀಕಾಂತೇರಿ ಧೂಮಾವತಿ ದೇವಸ್ಥಾನದ ಆಡಳಿತ ಮುಖ್ಯಸ್ಥರರಾದ ಮಂಜು ಕಾವ ವಕೀಲರ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಹೊಸಬೆಟ್ಟು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಜಿಲ್ಲಾಧ್ಯಕ್ಷರಾದ ವೀರಪ್ಪ ಮೂಡುಶೆಡೆ ಮತ್ತು ಪ್ರಮುಖರುಶ್ರೀಕೃಷ್ಣ ಶಾಖೆಯ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಬ್ರಹ್ಮಶ್ರೀ ನಾರಾಯಣ ಗುರು ಕಾಟಿಪಲ್ಲ ಅದರ ಅಧ್ಯಕ್ಷರಾದ ಮಾದವ ಅಮೀನ್ ಇತರ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಗೌರವ್ಯಾಧ್ಯಕ್ಷರು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಎಲ್ಲರೂ ಉಪಸಿತರಿದ್ದರು.


