ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನ ಸುರತ್ಕಲ್ ನಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ 08-02-2026 ಆದಿತ್ಯವಾರ 8 ನೇ ವರ್ಷದ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಕಾಂತೇರಿ ಧೂಮವತಿ ದೈವಸ್ಥಾನ ಸುರತ್ಕಲ್ ಇಲ್ಲಿ ನೆರವೇರಿತು .
ಈ ದೈವಸ್ಥಾನದ ಅನುವಂಶಿಕ ಮುಖ್ಯಸ್ಥರಾದ ಮಂಜು ಕಾವ ಪಿ ಟಿ ರೈ ಹಾಗೂ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಗೌರವ ಅಧ್ಯಕ್ಷರಾದ ಭಾಸ್ಕರ್ ಚಂದ್ರ ಶೆಟ್ಟಿ , ಅಧ್ಯಕ್ಷರಾದ ಯಶೋಧರ ಚೌಟ ಉಪಾಧ್ಯಕ್ಷರಾದ ನಾಗರಾಜ್ ಆಚಾರ್ಯ , ಶಾಖೆಯ ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಓಂಕಾರ ಮಹಿಳಾ ಘಟಕದ ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.


