ವಿಭಿನ್ನ ಕಥೆಯ 90 ಎಂಎಲ್

0
43

ಕೋಸ್ಟಲ್‌ವುಡ್‌ನಲ್ಲಿ ಶೀರ್ಷಿಕೆ ಸೆಳೆದಿರುವ ’90 ಎಂಎಲ್’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್‌ಗೆ ಬಿಡುಗಡೆಯಾಗಲಿರುವ ಇದರ ಕಥೆಯು ಉತ್ತಮ ಸಂದೇಶ ಹೊಂದಿದ್ದು, ಕೌಟುಂಬಿಕ ಮನರಂಜನೆ, ಪ್ರೀತಿ ಪ್ರೇಮ, ಸುಂದರ ಹಾಡು, ಹಾಸ್ಯದೊಂದಿಗೆ ಸಾಕಷ್ಟು ಅಚ್ಚರಿಗಳನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’, ‘ಮಿಡಲ್ ಕ್ಲಾಸ್ ಫ್ಯಾಮಿಲಿ’ಯಂತಹ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿರುವ ವಿನೀತ್ ಕುಮಾರ್ ನಾಯಕರಾಗಿದ್ದಾರೆ. ರುಹಾನಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ. ಇವರ ಜತೆಗೆ ಇದರಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾ‌ರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು, ಶೈಲಶ್ರೀ, ನಮಿತಾ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆಯೊಂದಿಗೆ ರಂಜಿತ್ ಸಿ. ಬಜಾಲ್ ನಿರ್ದೇಶಕರಾಗಿ ತಮ್ಮ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ಸಂಭಾಷಣೆಯನ್ನು ತುಳಸಿದಾಸ್ ಮಂಜೇಶ್ವರ್ ಬರೆದಿದ್ದು, ಛಾಯಾಗ್ರಹಣ ಛಾಯಾಗ್ರಹಣ ಈ ಸಿನಿಮಾದ ಟೈಟಲ್ ’90 ಎಂಎಲ್’ ಎಂದು ಹೇಳುವಾಗ ಇದು ಕುಡುಕರ ಸಿನಿಮಾ ಎಂದು ಅನಿಸಿದರೂ ಹೀರೊ ಯಾಕೆ ಕುಡಿಯುತ್ತಾನೆ ಹಾಗೂ ಅದರಿಂದ ಅವನಿಗಾಗುವ ಸಮಸ್ಯೆಗಳನ್ನು ಹಾಸ್ಯದ ಜೊತೆಗೆ ಬಿಂಬಿಸಲಾಗಿದೆ. ಒಳ್ಳೆಯ ಕಥೆಯಿರುವ ಈ ಸಿನಿಮಾವನ್ನು ಎಲ್ಲಾ ವರ್ಗಗಳ ಪ್ರೇಕ್ಷಕರು ನೋಡಬಹುದು. ಚೇತಕ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here