ವಾತ್ಸಲ್ಯ ಸದಸ್ಯೆ ದರೆಗುಡ್ಡೆಯ ಚಂದ್ರಾವತಿಗೆ ಮನೆ ಹಸ್ತಾಂತರ

0
60

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ)ಮೂಡುಬಿದ್ರಿ ತಾಲೂಕು ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮೂಡುಬಿದ್ರಿ ತಾಲೂಕಿನಬೆಳುವಾಯಿ ವಲಯದ ದರೆಗುಡ್ಡೆ ಗ್ರಾಮದ ವಾತ್ಸಲ್ಯ ಸದಸ್ಯರಾದ ಚಂದ್ರಾವತಿ ಯವರ ವಾತ್ಸಲ್ಯ ಮನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಡಾ. ಮೋಹನ್ ಆಳ್ವಾರವರು ದೀಪ ಬೆಳಗಿಸಿ ಉದ್ಘಾಟಿಸಿ ಹತ್ತಾಂತದಿಸಿದರು . ಧರ್ಮಸ್ಥಳ ಗ್ರಾಮಾಬಿವೃದ್ದಿಯೋಜನೆಯ ಮೂಲಕ ಮಾಶಾಸನ ನೀಡುತ್ತಿರುವ ಸದಸ್ಯರ ಪರಿಸ್ಥಿತಿಯನ್ನು ಗಮನಿಸಿದ ಮಾತೃಶ್ರೀ ಅಮ್ಮನವರು ವಾತ್ಸಲ್ಯ ಮನೆ ನಿರ್ಮಿಸಿ ಅವರ ಬದುಕಿಗೆ ಬೆಳಕನ್ನು ನೀಡಿದ್ದು ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಚಂದ್ರಾವತಿ ಯವರ ಮನೆಯನ್ನು ಗುರುತಿಸಿ, ಸುಂದರವಾದ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿ ಈ ಮನೆಯನ್ನು ಹಸ್ತಾಂತರಿಸಲು ಸಂತೋಷವಾಗುತ್ತದೆ.

ಈ ಮನೆಯಲ್ಲಿ ಚಂದ್ರಾವತಿಯವರ ಕುಟುಂಬ ಉತ್ತಮ ರೀತಿಯಲ್ಲಿ ಬಾಳಿ ಬದುಕುವಂತೆ ಶುಭ ಹಾರೈಸಿದರು. ಮೂಡಬಿದ್ರಿ ಅರಮನೆಯ ಕುಲದೀಪ್ ಚೌಟ ರವರು ರವರು ವಾತ್ಸಲ್ಯ ಮನೆಯ ನಿವಾಸಿಗಳಿಗೆ ಶುಭ ಹಾರೈಕೆ ಮಾಡಿದರು.ಮಾತೃಶ್ರೀ ಅಮ್ಮನವರು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಾತ್ಸಲ್ಯ ಕಾರ್ಯಕ್ರಮದ ಮೂಲಕ ನಿರ್ಗತಿಕರ ಪಾಲಿಗೆ ನೆರವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮೂಡುಬಿದ್ರಿ ತಾಲೂಕಿನ ಜನಜಾಗ್ರತಿ ವೇದಿಕೆ ಯ ಅಧ್ಯಕ್ಷರಾದ ಸುಭಾಸ್ ಚಂದ್ರ ಚೌಟ ರವರು, ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಸದಸ್ಯರಾದ ಪ್ರಸಾದ್, ಜಗತ್ ಪಾಲ s ಹೆಗ್ಡೆ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ ಗಳು ಉಪಸ್ಥಿತರಿದ್ದರು.

ತಾಲ್ಲೂಕು ಯೋಜನಾಧಿಕಾರಿ ಬಿ ಧನಂಜಯ್ ರವರು ಸ್ವಾಗತಿಸಿ , .ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ವಿದ್ಯಾ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here