ರಾತ್ರಿಯಿಡೀ ಸಾಗಿದ ದೈವ ಮೆರವಣಿಗೆ : ಸಜೀಪಮಾಗಣೆ ಕ್ಷೇತ್ರದಲ್ಲಿ ಸಂಪ್ರದಾಯದ ಮೆರುಗು

0
150

ಸಜೀಪಮಾಗಣೆ ಪಡೇರ ಮಾಡ ಕ್ಷೇತ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಜರಗುವ ಶ್ರೀ ದೈವ0ಗಳು ಹಾಗೂದೈ ಶ್ರೀ ನಾಲ್ಕೈಥಾಯ ದೈವದನೇಮ ಉತ್ಸವದ ಅಂಗವಾಗಿ ಪೂರ್ವಶಿಷ್ಟ ಸಂಪ್ರದಾಯದಂತೆ ಕಾಂತಡಿ ಗುತ್ತುವಿನಿಂದ ಸಂಕೇಶ ಬಂಡಾರದ ಮನೆಗೆ ಬಂದು ಶ್ರೀ ದೈವಗಳ ಕಿರುವಾಳು ಆಭರಣ ವಾದ್ಯ ಬ್ಯಾಂಡು ಕೊಂಬು ಸಕಲ ಬಿರುದಾವಳಿಗಳೊಂದಿಗೆ ರಜತ ಪಲ್ಲಕ್ಕಿಯಲ್ಲಿ ಆರು ಕಿಲೋಮೀಟರ್ ಕಾಲನಡಿಗೆಯಲ್ಲಿ ಇಡೀ ರಾತ್ರಿ ಸವಾರಿ ನಡೆಯಿತು.

ಕಲ್ಲಾಡಿಗೋಳಿ, ದೇರಾಜೆ, ಸಜೀಪ ಪೇಟೆಯ ಹೃದಯ ಭಾಗದಲ್ಲಿರುವ ರಾಮ ,ಲಕ್ಷ್ಮಣ, ಮಾಡದಾರು ಎಂಬ 5 ಕಟ್ಟೆಗಳಲ್ಲಿಕಟ್ಟೆ ಪೂಜೆ ಸ್ವೀಕರಿಸಿ ಪಡೇರ ಮಾಡ ಕ್ಷೇತ್ರಕ್ಕೆ ತಲುಪಿ ದ್ವಜಾರೋಹಣ ಗೊ0ಡು ನೇಮೋತ್ಸವ ಜರಗುವ ಸಂಪ್ರದಾಯ .

ಈ ಸಂದರ್ಭದಲ್ಲಿ ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯಕ್, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ನ ಗ್ರೀ,ಗುತ್ತು ವಿವೇಕ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ, ನಡುರಾತ್ರಿ ಹೊತ್ತಿನಲಿಮುಸಲ್ಮಾನರು ಸೇರಿ ಸಾವಿರಾರು ಭಕ್ತರು ಕಟ್ಟೆ ಪೂಜೆ ಹಾಗೂ ಭೇಟಿಯಲ್ಲಿಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here